About the Author

ಲೇಖಕ ಎನ್‌ ಶಂಕರಪ್ಪ ತೋರಣಗಲ್ಲು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಸಮಾಲೋಚಕ ಇಂಜಿನಿಯರ್‌ ಆಗಿದ್ದಾರೆ. 

ಕೃತಿಗಳು: ಸ್ವಾಮಿ ವಿವೇಕಾನಂದ ; ಕಪ್ಪು ಬಿಳುಪು (ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ),  ವಿಜ್ಞಾನ- ಏನು? ಹೇಗೆ? , ಸಂಗಂ - ತಮಿಳಗಂ, ಲಿಪಿ ನಿಗೂಢ, ಭಗವದ್ಗೀತೆ ಬೆಳಕು ನೀಡುವುದೇ?, ವಾಸ್ತು ಎಂಬ ವ್ಯಾಧಿ, ತಂತ್ರಜ್ಞಾನದ ದೇಸೀಕರಣ- ಕನ್ನಡದ ಜಾಗತೀಕರಣ, ಹಳಗನ್ನಡ- ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ .ಆರ್ಯರು ಯಾರು ? ಅವರು ಎಲ್ಲಿಂದ ಬಂದರು ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು ‘ಆರ್ಯರಿಗಾಗಿ ಹುಡುಕಾಟ : ಹೊರಗೆ-ಒಳಗೆ’ ರಚಿಸಿದ್ದಾರೆ. ‘ಸರ್ ಎಂ.ವಿ-ಒಂದು ಬಿಚ್ಚು ನೋಟ (ಸರ್.ಎಂ. ವಿಶ್ವೇಶ್ವರಯ್ಯನವರನ್ನು ತಾಂತ್ರಿಕ ವಿಮರ್ಶೆಗೆ ಒಳಪಡಿಸಿದ್ದಾರೆ)   ‘ಭಗವದ್ಗೀತೆ ಬೆಳಕು ನೀಡುವುದೇ’  ಹಾಗೂ ‘ಯೋಗ : ಭ್ರಮೆ ಮತ್ತು ವಾಸ್ತವ’ ಪುಸ್ತಕಗಳಲ್ಲಿ ವಿಭಿನ್ನ ವೈಚಾರಿಕ ಚಿಂತನೆಗಳಿವೆ. ‘ವಾಸ್ತು ಎಂಬ ವ್ಯಾಧಿ’ ಕೃತಿಯಲ್ಲಿ ಭಾರತವನ್ನು ಕಾಡುತ್ತಿರುವ ವಾಸ್ತುಶಾಸ್ತ್ರದ ಪೊಳ್ಳುತನವನ್ನು ಬಯಲಿಗೆಳೆಯಲಾಗಿದೆ. ‘ಅನಂತ-ಹಲವು ಸಾಂತ ಚಿಂತನೆಗಳು’ ಪುಸ್ತಕದಲ್ಲಿ ಗಣಿತ ಮತ್ತು ತತ್ತ್ವ ಶಾಸ್ತ್ರದಲ್ಲಿರುವ ಅನಂತದ ಕಲ್ಪನೆಯನ್ನು ಚರ್ಚಿಸಿದ್ದಾರೆ. ವಿಜ್ಞಾನಿಗಳು : ಜೀವನ-ಸಾಧನೆ, ಸಾಮಗ್ರಿಗಳು:ಹೊರಗೆ-ಒಳಗೆ ಇವರ ಇನ್ನಿತರ ಕೃತಿಗಳು.

ಎನ್‌ ಶಂಕರಪ್ಪ ತೋರಣಗಲ್ಲು