ಲಿಪಿ ನಿಗೂಢ

Author : ಎನ್‌ ಶಂಕರಪ್ಪ ತೋರಣಗಲ್ಲು

Pages 500

₹ 400.00




Year of Publication: 2012
Published by: ಕಾವ್ಯಕಲಾ ಪ್ರಕಾಶನ
Address: # 12873, 7ನೇ ಕ್ರಾಸ್, ಚಂದ್ರ‌ ಲೇಔಟ್ ವಿಜಯನಗರ, ಬೆಂಗಳೂರು-560040
Phone: 9964124831

Synopsys

ಲೇಖಕ ಎನ್. ಶಂಕರಪ್ಪ ತೋರಣಗಲ್ಲು ಅವರ ಕೃತಿ-ಲಿಪಿ ನಿಗೂಢ. ದಾಖಲೆಗಳ ಪೈಕಿ ಬರಹವು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಬರಹವೆಂದರೆ ಲಿಪಿ. ಈ ಲಿಪಿಗಳು ಎಲ್ಲಿಯೋ ರೂಪು ತಳೆಯುತ್ತವೆ. ಮತ್ತೆಲ್ಲಿಯೋ ರೂಪು ಬದಲಿಸಿಕೊಂಡು ವಿಸ್ತಾರವಾಗಿ ಹರಡುತ್ತವೆ. ಮಾತ್ರವಲ್ಲ; ಕವಲೊಡೆಯುತ್ತಾ, ವೈವಿಧ್ಯಮಯಗೊಳ್ಳುತ್ತವೆ. ಈ ಲಿಪಿಗಳೇ ಭಾಷೆಯ ರೂಪ ಪಡೆಯುತ್ತವೆ. ಈ ಭಾಷೆಯು ಸಂಸ್ಕೃತಿಗೆ, ನಾಗರಿಕತೆ ರೂಪು ನೀಡುತ್ತದೆ. ಬಹುತೇಕ ಲಿಪಿಗಳು ಕಾಲಕ್ರಮೇಣ ನಶಿಸಿ ಹೋಗಿವೆ. ಕೆಲವೊಂದು ಲಿಪಿಗಳನ್ನು ಕಂಡು ಮೂಲ ಮಾನವ ಬೆರಗುಗೊಂಡಿದ್ದು, ತನಗೆ ತಿಳಿಯದೇ ಹೋದಾಗ ಅದನ್ನು ದೈವತ್ವಕ್ಕೆ ಏರಿಸಿದ್ದಾನೆ. ಇಂತಹ ಅಚ್ಚರಿಯ ಸಂಗತಿಗಳ ಕುರಿತು ನಡೆದ ಜಿಜ್ಞಾಸೆಯೇ ಈ ಕೃತಿಯ ವೈಶಿಷ್ಟ್ಯವಾಗಿದೆ.

About the Author

ಎನ್‌ ಶಂಕರಪ್ಪ ತೋರಣಗಲ್ಲು

ಲೇಖಕ ಎನ್‌ ಶಂಕರಪ್ಪ ತೋರಣಗಲ್ಲು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಸಮಾಲೋಚಕ ಇಂಜಿನಿಯರ್‌ ಆಗಿದ್ದಾರೆ.  ಕೃತಿಗಳು: ಸ್ವಾಮಿ ವಿವೇಕಾನಂದ ; ಕಪ್ಪು ಬಿಳುಪು (ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ),  ವಿಜ್ಞಾನ- ಏನು? ಹೇಗೆ? , ಸಂಗಂ - ತಮಿಳಗಂ, ಲಿಪಿ ನಿಗೂಢ, ಭಗವದ್ಗೀತೆ ಬೆಳಕು ನೀಡುವುದೇ?, ವಾಸ್ತು ಎಂಬ ವ್ಯಾಧಿ, ತಂತ್ರಜ್ಞಾನದ ದೇಸೀಕರಣ- ಕನ್ನಡದ ಜಾಗತೀಕರಣ, ಹಳಗನ್ನಡ- ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ .ಆರ್ಯರು ಯಾರು ? ...

READ MORE

Related Books