About the Author

ಲೇಖಕ ನರಸಿಂಗರಾವ್ ಹೇಮನೂರು ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು., ತಂದೆ ಮೋನಪ್ಪ ತಾಯಿ ಅಯ್ಯಮ್ಮ. ಬಿ.ಎ, ಡಿಪ್ಲೊಮಾ ಇನ್ ಸೆಕ್ರಟೆರಿಯಲ್ ಪ್ರಾಕ್ಟಿಸ್, ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿ, ಆ ಕಂಪನಿಯ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ತದನಂತರ ಸೇಡಂನಲ್ಲಿಯ ಸೌತ್ ಇಂಡಿಯಾ ಸಿಮೆಂಟ್ ನಲ್ಲಿಯೂ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ಕೆಲಸ ಮಾಡಿ, ನಂತರ ನಿವೃತ್ತರಾಗಿದ್ದಾರೆ. ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸೇಡಂನಲ್ಲಿಯ ನೃಪತುಂಗ ಅಧ್ಯಯನ ಸಂಸ್ಥೆಯ ಸ್ಥಾಪಕ ಸದಸ್ಯರು, ತಿಂಥಿಣಿಯ ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, ಕಲಬುರಗಿಯಲ್ಲಿ ವಾಸ. 

ಕೃತಿಗಳು: ಇಂದ್ಯಾಕ ಬಂದಿ, ನೆನಪು ನೂರು ನೂರು ತರಹ (ಕವನ ಸಂಕಲನಗಳು), ಜ್ಯೋತಿ, ನೃಪತುಂಗನ ನೆಲದಿಂದ (ಸಂಪಾದಿತ ಸ್ಮರಣ ಸಂಚಿಕೆಗಳು),  ಮೌನಯಾನ, ವಿಶ್ವರಥ, ವಿಶ್ವರೂಪ, ಸಮರ್ಪಣೆ (ಸಂಸ್ಮರಣೆ ) ವಿಶ್ವದೊಡೆಯ (ಉಪನ್ಯಾಸಗಳ ಸಂಗ್ರಹ). ಶತಕ ಕಂಡ ಶ್ರೀಮಠ (ಲೇಬಗಿರಿ ಶ್ರೀ ಮಠದ ಶತಮಾನೋತ್ಸವ ನಿಮಿತ್ತ ಪ್ರಕಟಿತ ಗ್ರಂಥ) ಶ್ರೀ ವೀರಬ್ರಹ್ಮೇಂದ್ರ ಶ್ರೀಗಳ ಕಾಲಜ್ಞಾನ (ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ),, ಅಲ್ಲದೇ, ವ್ಯಕ್ತಿಚಿತ್ರಗಳೂ ಹಾಗೂ ಸಾಮಾಜಿಕ-ಧಾರ್ಮಿಕ ವಿಷಯಕ್ಕೆ ಸಂಬಂಧಿಸಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು: ಯಾದಗಿರಿ/ಕಲಬುರಗಿಯ ಆನೇಗುಂದಿ ಸಂಸ್ಥಾನ ಮಠದಿಂದ ಸಮಾಜ ಸೇವೆಗಾಗಿ ವಿಶ್ವಕರ್ಮ ಸಮಾಜ ರತ್ನ ಪ್ರಶಸ್ತಿ, ರಾಜ್ಯ ವಿಶ್ವಕರ್ಮ ನೌಕಕರ ಸಂಘದಿಂದ ವಿಶ್ವಕರ್ಮ ಸಮಾಜ ರತ್ನ ಪ್ರಶಸ್ತಿ, ವಿಶ್ವಕರ್ಮ ಹೋರಾಟ ಸಮಿತಿಯಿಂದ ಕನ್ನಡ ಸಿರಿ ಪ್ರಶಸ್ತಿ, ಬೆಂಗಳೂರಿನ ಪತ್ರಿಕಾ ಮಾಧ್ಯಮದಿಂದ ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ವಿಜಯಪುರ ಜಿಲ್ಲೆಯ ತಿಳಗೂಳದ ಬ್ರಹ್ಮವಿದ್ಯಾಶ್ರಮದಿಂದ ಸಾಹಿತ್ಯ ಬ್ರಹ್ಮ ಪ್ರಶಸ್ತಿ, 

ನರಸಿಂಗರಾವ್ ಹೇಮನೂರು

(01 Jan 1945)