
ʻಮಹೋಪಾಧ್ಯಾಯ ಅರ್ಜುನಾಚಾರ್ಯ ತೆಂಗಳಿಕರʼ ಸಮಗ್ರ ಸಾಹಿತ್ಯ ಸಂಪುಟ-1 ಕೃತಿಯಾಗಿದೆ. ವ್ಹಿ.ಜಿ ದೀಕ್ಷಿತ ಹಾಗೂ ಕೆ.ಪಿ ಈರಣ್ಣ ಅವರ ಗೌರವ ಸಂಪಾದಕರಾಗಿದ್ದು, ನರಸಿಂಗರಾವ ಹೇಮನೂರ ಮತ್ತು ಇಂ ಭೀಮಸೇನ ಬಡಿಗೇರ ಅವರ ಸಂಪಾದಕರಾಗಿದ್ದಾರೆ. ಕೃತಿಯ ಬಗ್ಗೆ ಶ್ರೀ ಡಿ. ರೂಢಾಸ್ವಾಮಿಗಳು ಹೀಗೆ ಹೇಳಿದ್ದಾರೆ; ನಮ್ಮ ಸಮಾಜ ಹಿಂದುಳಿಯುವುದಕ್ಕೆ ಮೂಲ ಕಾರಣ ಸಾಹಿತ್ಯ ಬೆಳವಣಿಗೆ ಇಲ್ಲದಕ್ಕೆ. ಅಂತಹ ಕೊರತೆಯನ್ನು ತಾವು ಕೃತಿರತ್ನದ್ವಯಗಳಿಂದ ತುಂಬಿ ಕೊಟ್ಟಿದ್ದೀರಿ. ಇವೆಲ್ಲವುಗಳ ಸುಂದರ ಸಂಗಮ. ಈ ಕೃತಿಗಳಿಂದ ತಮ್ಮ ಲೇಖನ ವೈಖರಿ ಆಳವಾದ ಅಧ್ಯಯನ, ವೈಶ್ವಕರ್ಮಣ ಧರ್ಮದ ತಿರುಳು ಪರಂಪರೆಗಳ ವೈಭವ, ಪಾಂಡಿತ್ಯ, ವಿದ್ವತ್ತು, ಸರಳತೆ, ವೈಶಿಷ್ಟ್ಯ ಪೂರ್ಣವಾದ ಸಾಹಿತ್ಯ ಲಕ್ಷಣ ಕಂಡು ಬರುವಂತಾಗಿದೆ ಎಂದು ತಿಳಿಸಿದ್ದಾರೆ.

ಲೇಖಕ ನರಸಿಂಗರಾವ್ ಹೇಮನೂರು ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು., ತಂದೆ ಮೋನಪ್ಪ ತಾಯಿ ಅಯ್ಯಮ್ಮ. ಬಿ.ಎ, ಡಿಪ್ಲೊಮಾ ಇನ್ ಸೆಕ್ರಟೆರಿಯಲ್ ಪ್ರಾಕ್ಟಿಸ್, ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿ, ಆ ಕಂಪನಿಯ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ತದನಂತರ ಸೇಡಂನಲ್ಲಿಯ ಸೌತ್ ಇಂಡಿಯಾ ಸಿಮೆಂಟ್ ನಲ್ಲಿಯೂ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ಕೆಲಸ ಮಾಡಿ, ನಂತರ ನಿವೃತ್ತರಾಗಿದ್ದಾರೆ. ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸೇಡಂನಲ್ಲಿಯ ನೃಪತುಂಗ ಅಧ್ಯಯನ ಸಂಸ್ಥೆಯ ಸ್ಥಾಪಕ ಸದಸ್ಯರು, ತಿಂಥಿಣಿಯ ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ...
READ MORE