ನೆನಪು ನೂರು ನೂರು ತರಹ

Author : ನರಸಿಂಗರಾವ್ ಹೇಮನೂರು

Pages 114

₹ 125.00
Year of Publication: 2020
Published by: ಸಂಸ್ಕೃತಿ ಪ್ರಕಾಶನ
Address: ವಾಹಿನಿ ವಿಹಾರ, ಬಸವನಗರ, ಸೇಡಂ-585222

Synopsys

ಕವಿ ನರಸಿಂಗರಾವ್ ಹೇಮನೂರು ಅವರ ಕವನಗಳ ಸಂಕಲನ-ನೆನಪು ನೂರು ನೂರು ತರಹ. ಈ ಕವನ ಸಂಕಲನದಲ್ಲಿ, 20 ಚುಟುಕುಗಳು, 20 ಭಾಷಾಂತರಿತ ಶಾಯಿರಿಗಳು, 7 ವಚನಗಳು, 6 ತ್ರಿಪದಿಗಳು ಹಾಗೂ 35 ಕವನಗಳು ಒಳಗೊಂಡಿವೆ.  ಕವನಗಳ ವಸ್ತುವಿನಲ್ಲಿ ವೈವಿಧ್ಯತೆ ಇದೆ. ಶೈಲಿಯು ಓದುಗರನ್ನು ಸೆಳೆಯುತ್ತದೆ. ಬಹುತೇಕ ಕವನಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯ ಎಚ್ಚರವೂ ಇದೆ.

ಸಾಹಿತಿ ಪ್ರೊ. ವಸಂತ ಕುಷ್ಟಗಿ ಅವರು ಕೃತಿಗೆ ಮುನ್ನುಡಿ ಬರೆದು ‘ವ್ಯಕ್ತಿತ್ವ ವಿಕಾಸಕ್ಕೆ ದರ್ಶನವಾಗುವ ಎಲ್ಲ ವಸ್ತು ವಿಚಾರಗಳು ಸಂಗತವಾಗಿದ್ದು, ನೆನಪುಗಳು ನೂರು ನೂರು ತರಹದಿಂದಾಗಿ ಎಲ್ಲವೂ ಕೂಡು ಸಂಗಮವಾಗಿ  ಶೂನ್ಯಕ್ಕೆ ಶೂನ್ಯದ ಪ್ರಸ್ತಾರದ ತಿರುವು ಹೊಂದಿಕೆಯಾಗುತ್ತಲೇ ಹೋಗಿದೆ’ ಎಂದು ಪ್ರಶಂಸಿಸಿದ್ದಾರೆ. ಈ ಸಂಕಲನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ‘ಕವನಗಳಲ್ಲಿ ವೈವಿಧ್ಯತೆ ಇದೆ. ಕವಿಯ ಅಂತರ್ಮುಖಿ ಸ್ವಭಾವ, ಆಳವಾದ ಚಿಂತನೆ, ಭಾಷೆಯ ಮೇಲಿನ ಹಿಡಿತದಿಂದಾಗಿ ಕವನಗಳು ಹೊಸ ಹರೆಯ ಹೊಂದಿವೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ. 

About the Author

ನರಸಿಂಗರಾವ್ ಹೇಮನೂರು
(01 January 1945)

ಲೇಖಕ ನರಸಿಂಗರಾವ್ ಹೇಮನೂರು ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು., ತಂದೆ ಮೋನಪ್ಪ ತಾಯಿ ಅಯ್ಯಮ್ಮ. ಬಿ.ಎ, ಡಿಪ್ಲೊಮಾ ಇನ್ ಸೆಕ್ರಟೆರಿಯಲ್ ಪ್ರಾಕ್ಟಿಸ್, ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿ, ಆ ಕಂಪನಿಯ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ತದನಂತರ ಸೇಡಂನಲ್ಲಿಯ ಸೌತ್ ಇಂಡಿಯಾ ಸಿಮೆಂಟ್ ನಲ್ಲಿಯೂ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ಕೆಲಸ ಮಾಡಿ, ನಂತರ ನಿವೃತ್ತರಾಗಿದ್ದಾರೆ. ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸೇಡಂನಲ್ಲಿಯ ನೃಪತುಂಗ ಅಧ್ಯಯನ ಸಂಸ್ಥೆಯ ಸ್ಥಾಪಕ ಸದಸ್ಯರು, ತಿಂಥಿಣಿಯ ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ...

READ MORE

Related Books