About the Author

ಕೃಷಿಕರಾದ ನಾರಾಯಣ ರೆಡ್ಡಿ ಅವರು ಸಾವಯವ ಕೃಷಿಯ ಪ್ರಾಮುಖ್ಯತೆ, ಅಗತ್ಯತೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿ ನುಡಿದಂತೆಯೇ ನಡೆದವರು. ಸಾವಯವ ಕೃಷಿಗೆ ರಾಜ್ಯದಲ್ಲಿ ನೆಲೆ, ಸ್ಥೈರ್ಯ ಎರಡೂ ರೂಪಿಸಿಕೊಟ್ಟವರು. ಪ್ರಗತಿಪರ ರೈತ ಮತ್ತು ಕೃಷಿತಜ್ಞರಾಗಿದ್ದ ಅವರು ಮೂಲತಃ ದೊಡ್ಡಬಳ್ಳಾಪುರದವರು. ಇವರು ಸಾವಯವ ಕೃಷಿಯ ಸಾಧನೆಗಾಗಿ 'ನಾಡೋಜ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ ಮಾತ್ರವಲ್ಲ ಕೃತಿಗಳನ್ನು ರಚಿಸಿದ್ದಾರೆ. ‘ಸುಸ್ಥಿರ ಕೃಷಿ ಪಾಠಗಳು’ ಅವರ ಪ್ರಕಟಿತ ಕೃತಿ.

ನಾರಾಯಣ ರೆಡ್ಡಿ