About the Author

ಪಿ.ಆರಡಿ ಮಲ್ಲಯ್ಯ ಕಟ್ಟೇರ ಅವರು ಮೂಲತಃ ಚಳ್ಳಕೆರೆ ತಾಲೂಕಿನ ಓಬಯ್ಯನಹಟ್ಟಿ ಕಟ್ಟೇರಕಪ್ಲೆ ಗ್ರಾಮದವರು. ತಂದೆ ಪರ್ವತಯ್ಯ, ತಾಯಿ ಪಾರ್ವತಮ್ಮ. ಕುವೆಂಪು ವಿ.ವಿ. ಸ್ನಾತಕೋತ್ತರ ಪದವಿಯಲ್ಲಿ 2ನೇ ರ್‍ಯಾಂಕ್, ‘ನೀರಗನ್ನಡಿ’ ಕವನ ಸಂಕಲನ ಪ್ರಕಟವಾಗಿದೆ. ಬಯಲಾಟ ಅಕಾಡೆಮಿ ಫೆಲೋಶಿಪ್ ನಡಿ ‘ಬಯಲಾಟದ ಕಥನಗಳಲ್ಲಿ ಸಾಂಸ್ಕೃತಿಕ ಸಂಘರ್ಷ: ಚಾರ್ವಾಕ, ಬುದ್ಧ, ಡಾರ್ವಿನ್, ಕಾರ್ಲಮಾಕ್ಸ್ ಮತ್ತು ಅಂಬೇಡ್ಕರ್ ದೃಷ್ಟಿಕೋನ’  ಮಹಾಪ್ರಬಂಧ ಮಂಡಿಸಿದ್ದಾರೆ.

ಅಂಬೇಡ್ಕರ್ ಸಂಶೋಧನಾ ಫೆಲೋಶಿಪ್ ಅಡಿ ‘ಆದಿಯಾ, ಕಲ್ಲಾಡಿ, ನಾಯಾಡಿ, ನಲ್ಕಡಾಯ, ಜಗ್ಗಲಿ’ ಶೀರ್ಷಿಕೆಯಡಿ ಅಲೆಮಾರಿಗಳ ಕುರಿತು ಅಧ್ಯಯನ ಮಾಡಿದ್ದಾರೆ. ಆಧುನಿಕ ಸಮುದಾಯಗಳು ಹಾಗೂ ಕುಲಚಿನ್ಹೆಗಳು’ ಇವರ ಪಿಎಚ್.ಡಿ. ಪ್ರಬಂಧ. ಭಾಷೆ ಕುರಿತು ಇವರು ಬರೆದ ಎರಡು ಲೇಖನಗಳನ್ನು ಕುವೆಂಪು ಹಾಗೂ ದಾವರಣಗೆರೆ ವಿ.ವಿ.ಗಳು ಪಠ್ಯವಾಗಿಸಿವೆ. ಯುವಕವಿ ಚೇತನ, ಸಿರಿಗನ್ನಡ ಸುವರ್ಣ ಕಮಲ, ವಾಲ್ಮೀಕಿ ಸಿರಿ ಪ್ರಶಸ್ತಿಗಳು ಸಂದಿವೆ. 

ಪಿ. ಆರಡಿಮಲ್ಲಯ್ಯ ಕಟ್ಟೇರ