ಗಗ್ಗರಿ ನುಡಿಸುವ ಬೆರಳು

Author : ಪಿ. ಆರಡಿಮಲ್ಲಯ್ಯ ಕಟ್ಟೇರ

Pages 104

₹ 100.00




Year of Publication: 2019
Published by: ವಂಶಿ ಪಬ್ಲಿಕೇಷನ್ಸ್
Address: ನೆಲಮಂಗಲ, ಬೆಂಗಳೂರು

Synopsys

ಗಗ್ಗರಿ ನುಡಿಸುವ ಬೆರಳು-ಪಿ. ಆರಡಿ ಮಲ್ಲಯ್ಯ ಕಟ್ಟೇರ ಅವರು ಬರೆದ ಕವನ ಸಂಕಲನ. ಹೊಸತನವೊಂದೇ ಈ ಕವಿತೆಗಳ ಶಕ್ತಿಯಲ್ಲ. ಜಾಗತೀಕರಣ ಹಾಗೂ ಕೋಮುವಾದಗಳು ಬಿತ್ತಿ ಬೆಳೆಯುತ್ತಿರುವ ಏಕಭಾಷೆ., ಏಕಲಿಂಗ, ಏಕಧರ್ಮ, ಜನಾಂಗೀಯ ಶುದ್ಧತೆಗಳಂತಹ, ಸಾಂಸ್ಕೃತಿಕ ಪರಿಭಾಷೆಗಳನ್ನು ನಿರ್ಲಕ್ಷಿಸುವ , ತಿರಸ್ಕರಿಸುವ, ಭಂಜಿಸುವ, ಸವಾಲನ್ನೂ ಸ್ವೀಕರಿಸುತ್ತವೆ ಎಂದು ಕೃತಿಗೆ ಬೆನ್ನುಡಿ ಬರೆದ ಕವಿ ಡಾ. ಎಂ.ಡಿ.ವಕ್ಕುಂದ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮ್ಯಾಸಬೇಡ ಜನಾಂಗದ ಧ್ವನಿಯನ್ನು ಕಾವ್ಯವಾಗಿಸಿದ್ದಾರೆ. ಮ್ಯಾಸಬಢ ಜನಾಂಗದ ಬದುಕು-ಬವಣೆ, ಸಂಭ್ರಮ, ದರ್ಶನ ಹೀಗೆ ಹತ್ತು ಹಲವು ರೀತಿಯಲ್ಲಿ ಸಾಂಸ್ಕೃತಿಕವಾಗಿ  ಕಾವ್ವ ವಸ್ತುಗಳನ್ನಾಗಿಸಿದ್ದಾರೆ.

About the Author

ಪಿ. ಆರಡಿಮಲ್ಲಯ್ಯ ಕಟ್ಟೇರ

ಪಿ.ಆರಡಿ ಮಲ್ಲಯ್ಯ ಕಟ್ಟೇರ ಅವರು ಮೂಲತಃ ಚಳ್ಳಕೆರೆ ತಾಲೂಕಿನ ಓಬಯ್ಯನಹಟ್ಟಿ ಕಟ್ಟೇರಕಪ್ಲೆ ಗ್ರಾಮದವರು. ತಂದೆ ಪರ್ವತಯ್ಯ, ತಾಯಿ ಪಾರ್ವತಮ್ಮ. ಕುವೆಂಪು ವಿ.ವಿ. ಸ್ನಾತಕೋತ್ತರ ಪದವಿಯಲ್ಲಿ 2ನೇ ರ್‍ಯಾಂಕ್, ‘ನೀರಗನ್ನಡಿ’ ಕವನ ಸಂಕಲನ ಪ್ರಕಟವಾಗಿದೆ. ಬಯಲಾಟ ಅಕಾಡೆಮಿ ಫೆಲೋಶಿಪ್ ನಡಿ ‘ಬಯಲಾಟದ ಕಥನಗಳಲ್ಲಿ ಸಾಂಸ್ಕೃತಿಕ ಸಂಘರ್ಷ: ಚಾರ್ವಾಕ, ಬುದ್ಧ, ಡಾರ್ವಿನ್, ಕಾರ್ಲಮಾಕ್ಸ್ ಮತ್ತು ಅಂಬೇಡ್ಕರ್ ದೃಷ್ಟಿಕೋನ’  ಮಹಾಪ್ರಬಂಧ ಮಂಡಿಸಿದ್ದಾರೆ. ಅಂಬೇಡ್ಕರ್ ಸಂಶೋಧನಾ ಫೆಲೋಶಿಪ್ ಅಡಿ ‘ಆದಿಯಾ, ಕಲ್ಲಾಡಿ, ನಾಯಾಡಿ, ನಲ್ಕಡಾಯ, ಜಗ್ಗಲಿ’ ಶೀರ್ಷಿಕೆಯಡಿ ಅಲೆಮಾರಿಗಳ ಕುರಿತು ಅಧ್ಯಯನ ಮಾಡಿದ್ದಾರೆ. ಆಧುನಿಕ ಸಮುದಾಯಗಳು ಹಾಗೂ ಕುಲಚಿನ್ಹೆಗಳು’ ಇವರ ಪಿಎಚ್.ಡಿ. ಪ್ರಬಂಧ. ಭಾಷೆ ಕುರಿತು ಇವರು ಬರೆದ ...

READ MORE

Related Books