About the Author

ಗ್ರಂಥ ಸಂಪಾದನೆ, ಜಾನಪದ ಸಂಶೋಧನೆ ಹಾಗೂ ಜಾನಪದ ಗಾಯನದಲ್ಲಿ ತೊಡಗಿಕೊಂಡಿರುವ ಪಿ.ಕೆ.ರಾಜಶೇಖರ್ ಅವರು ಜನಿಸಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಜಾನಪದ ಸಂಶೋಧನೆಯಲ್ಲಿ ತೊಡಗಿದ್ದಾರೆ. 

ಮಾನಸದೀಪ್ತಿ, ಪ್ರತಿಬಿಂಬ, ಸ್ವಾತಿ ಮುತ್ತುಗಳು, ನಾನಲ್ಲದ ನಾನು(ಕಾವ್ಯ), ಪದವಿವರಣಕೋಶ, ಪದ ಸಂಪದ(ಭಾಷಾ ಶಾಸ್ತ್ರ), ಸಮಾಜ ಸೇವಾರತ್ನ, ವೀರಯೋಧ ಬೆಳ್ಳಿಯಪ್ಪ(ಜೀವನ ಚರಿತ್ರೆ), ಬೆಟ್ಟದ ಚಾಮುಂಡಿ, ಜನಪದ ರಾಮಾಯಣ, ಜನಪದ ಮಹಾಕಾವ್ಯ, ಮಲೆಯ ಮಾದೇಶ್ವರ, ಮಾಗಡಿ ಕೆಂಪೇಗೌಡ, ಹಾಡೋ ಮುತ್ತಿನರಗಿಣಿ, ಅವ್ವ ನಿನ ದನಿ, ಅಪರಂಜಿ, ನಮ್ಮ ಜನಪದ ವಾದ್ಯಗಳು, ಜನಪದ ಬಸವಪುರಾಣ, ಊರ ಹೆಸರಿನ ಕಥೆಗಳು, ಚುಂಚನಗಿರಿ ಭೈರವೇಶ್ವರ, ಜನಪದ ವೀರಕಾವ್ಯ, ಪಿರಿಯಾಪಟ್ಟಣದ ಕಾಳಗ, ಭೂಮಿ ತೂಕದ ಮಾತು, ಆಲಂಬಾಡಿಯ ಘನಶರಣ, ಪುರಾಣಗಳು, ಪುರುಷನ ಪುಣ್ಯ ನಾರೀ ಭಾಗ್ಯ, ಬಾರಯ್ಯ ಬೆಳದಿಂಗಳೆ, ಚಾಮುಂಡಿ ಸಿರಿ ಚಾಮುಂಡಿ, ಸಿರಿ ಚುಂಚನಗಿರಿ, ಕರಪಾಲ ಬಸವ ಪುರಾಣ, ಜಾನಪದ ಮಹಾಭಾರತ, ಹೊನ್ನಾರು ಜನಪದ ಗೀತೆಗಳು, ಗಂಧಾದಗವಲೆದ್ದವೋ, ಜನಪದ ಜೋಕುಗಳು, ಜನಪದ ಗಣಿತ ಪ್ರಪಂಚ, ಜಾನಪದ ಸಂಭ್ರಮ, ಕೋಗಿಲಾಗಿ ಕೂಗುತ್ತೀಯಲ್ಲೋ, ಒಳ್ಳೆಯ ಮಾತಿಗೆ ಕಣ್ಣೀರೆ ಬಹುಮಾನ, ಮೂರು ಪ್ರಾಣಿಯ ಕಥೆಗಳು ಮೊದಲಾದವುಗಳು(ಜಾನಪದ), ಚಿನ್ನದ ತುಪಳು, ಅಭಿನವ ಕಾಳಿದಾಸ, ವಿದ್ಯಾವಿಶಾರದೆ ಕಂತಿ, ದಲಿತ ಭಾರತ(ಮಕ್ಕಳ ಸಾಹಿತ್ಯ) ಮುಂತಾದವು ಇವರ ಸಾಹಿತ್ಯಿಕ ಕೊಡುಗೆಗಳಾಗಿವೆ. 

ಇವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ವಿಶೇಷ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ. 

ಪಿ.ಕೆ. ರಾಜಶೇಖರ್

(13 Oct 1946)

ABOUT THE AUTHOR