ದೇವರಗುಡ್ಡರ ಕಾವ್ಯಗಳು (ಕಂಸಾಳೆ ಪದಗಳು)

Author : ಪಿ.ಕೆ. ರಾಜಶೇಖರ್

Pages 504

₹ 50.00




Year of Publication: 2014
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಕಂಸಾಳೆಯವರನ್ನು ‘ಮಾದೇಶ್ವರನ ಗುಡ್ಡರು’ ‘ದೇವರಗುಡ್ಡರು’ ‘ಸಿರಿಯ ದೇವರಗುಡ್ಡರು’ ಎಂಬೆಲ್ಲ ಹೆಸರಿನಿಂದ ಕರೆಯುತ್ತಾರೆ. ಗುಡ್ಡ ಎಂದರೆ ಮಾದೇಶ್ವರ ಭಕ್ತ ಅಥವಾ ಮಾದೇಶ್ವರ ಶಿಶು ಮಗ. ಗುಡ್ಡನನ್ನು ಬಿಡುವ ಪದ್ಧತಿಯು ಕಂಸಾಳೆಯವರ ಆಚರಣೆಗಳಲ್ಲಿ ವಿಶಿಷ್ಟವಾದುದು.

ದೇವರಗುಡ್ಡರ ಕಾವ್ಯಗಳು (ಕಂಸಾಳೆ ಪದಗಳು) ಕೃತಿಯು ಕಂಸಾಳೆ ಹಾಡುಗಳನ್ನು ವಿವರಿಸುತ್ತದೆ. ಜನಪದ ಮಹಾಕಾವ್ಯ ‘ಮಲೆಯ ಮಾದೇಶ್ವರ’ದಿಂದ ಆಯ್ದ ಭಾಗಗಳು, ದುಂಡಮ್ಮನ ಸಾಲು, ಲವಕುಶರ ಕಾಳಗ, ನೀಲವೇಣಿ, ಲಿಂಗರಾಜಮ್ಮ, ಮೈದಾಳ ರಾಮಣ್ಣ ಕುರಿತು ಸಂಪೂರ್ಣ ಮಾಹಿತಿ ಕೃತಿಯಲ್ಲಿದೆ. ಪಿ.ಕೆ. ರಾಜಶೇಖರ ಕೃತಿಯನ್ನು ಸಂಪಾದಿಸಿದ್ದಾರೆ.

About the Author

ಪಿ.ಕೆ. ರಾಜಶೇಖರ್
(13 October 1946)

ಗ್ರಂಥ ಸಂಪಾದನೆ, ಜಾನಪದ ಸಂಶೋಧನೆ ಹಾಗೂ ಜಾನಪದ ಗಾಯನದಲ್ಲಿ ತೊಡಗಿಕೊಂಡಿರುವ ಪಿ.ಕೆ.ರಾಜಶೇಖರ್ ಅವರು ಜನಿಸಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಜಾನಪದ ಸಂಶೋಧನೆಯಲ್ಲಿ ತೊಡಗಿದ್ದಾರೆ.  ಮಾನಸದೀಪ್ತಿ, ಪ್ರತಿಬಿಂಬ, ಸ್ವಾತಿ ಮುತ್ತುಗಳು, ನಾನಲ್ಲದ ನಾನು(ಕಾವ್ಯ), ಪದವಿವರಣಕೋಶ, ಪದ ಸಂಪದ(ಭಾಷಾ ಶಾಸ್ತ್ರ), ಸಮಾಜ ಸೇವಾರತ್ನ, ವೀರಯೋಧ ಬೆಳ್ಳಿಯಪ್ಪ(ಜೀವನ ಚರಿತ್ರೆ), ಬೆಟ್ಟದ ಚಾಮುಂಡಿ, ಜನಪದ ರಾಮಾಯಣ, ಜನಪದ ಮಹಾಕಾವ್ಯ, ಮಲೆಯ ಮಾದೇಶ್ವರ, ಮಾಗಡಿ ಕೆಂಪೇಗೌಡ, ಹಾಡೋ ಮುತ್ತಿನರಗಿಣಿ, ಅವ್ವ ನಿನ ದನಿ, ಅಪರಂಜಿ, ನಮ್ಮ ಜನಪದ ವಾದ್ಯಗಳು, ಜನಪದ ಬಸವಪುರಾಣ, ಊರ ಹೆಸರಿನ ...

READ MORE

Related Books