About the Author

ಶಿವಮೊಗ್ಗೆಯ ತೀರ್ಥಹಳ್ಳಿಯವರಾದ ಪದ್ಮಜಾ  ಜೋಯ್ಸ್ ಜನಿಸಿದ್ದು ದರಲಗೋಡು ಎಂಬ ಗ್ರಾಮದಲ್ಲಿ. ತಂದೆ ನಾರಾಯಣ ಜೋಯ್ಸ್ ,ತಾಯಿ ಸ್ವರ್ಣ ಜೋಯ್ಸ್. ಕೋಣಂದೂರು ಮತ್ತು ತೀರ್ಥಹಳ್ಳಿಯ ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿರುವ ಇವರು ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿಯನ್ನು ಪಡೆದು ಅದರಲ್ಲಿಯೇ ಬದುಕು ಕಂಡುಕೊಂಡವರು. ಹಲವು ವರ್ಷ ನೆಲಮಂಗಲದ ರುಡ್ ಸೆಟ್ ನಲ್ಲಿ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸಿದ ಇವರಿಗೆ ಹತ್ತು ಹಲವು ಕ್ರಿಯಾತ್ಮಕ ಹವ್ಯಾಸಗಳಿವೆ. ಸ್ವಂತ ಫಿನಿಕ್ಸ್ ಎಂಬ ಸಂಸ್ಥೆಯ ಕಟ್ಟಿ ಬಹಳಷ್ಟು ಆಸಕ್ತರಿಗೆ ಕರಕುಶಲ ಕಲೆಯ ಕಲಿಸಿದ ಶ್ರೇಯ ಇವರದು.

ಓದು ಮತ್ತು ಬರವಣಿಗೆಯ ಬಗ್ಗೆ ತೀರದ ಶ್ರದ್ಧೆ ಇಟ್ಟುಕೊಂಡಿರುವ ಇವರ ಕತೆ, ಕವನ, ಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. 2018ರಲ್ಲಿ ಪ್ರಕಟವಾದ ಅಗ್ನಿಯ ರೆಕ್ಕೆಗಳನ್ನು ಧರಿಸಿ ಮತ್ತು 2020 ರಲ್ಲಿ ಪ್ರಕಟವಾದ ಚಿದ್ವಿಲಾಸ ಎಂಬ ಕವನ ಸಂಕಲನಗಳು ಜನಪ್ರಿಯತೆ ಗಳಿಸಿವೆ. ಜೊತೆಗೆ ಇವರ ಸಾಹಿತ್ಯ ಪ್ರೀತಿಯನ್ನು ಗುರುತಿಸಿ ಹಲವು ಸಂಘಟನೆಗಳು ಇವರನ್ನು ಸನ್ಮಾನಿಸಿ, ಪುರಸ್ಕರಿಸಿ, ಪ್ರಶಸ್ತಿಗಳ ನೀಡಿ ಗೌರವಿಸಿವೆ. ಜೊತೆಗೆ ಚೇತನಾ ಪ್ರಕಾಶನ ಹುಬ್ಬಳ್ಳಿ, ಕನ್ನಡ ಸಾಹಿತ್ಯ ಪ್ರತಿಷ್ಠಾನ, ಕರ್ನಾಟಕ ಸೋಷಿಯಲ್ ಕ್ಲಬ್, ಸುವರ್ಣ ಮಹಿಳೆಯರ ಕನಸಿನ ಧಾರವಾಡ ಸಂಸ್ಥೆಗಳು ಸಂಯುಕ್ತವಾಗಿ 2021ರಲ್ಲಿ ಆಯೋಜಿಸಿದ್ದ ಮಹಿಳಾ ಮಹಾ ಸಮ್ಮೇಳನದ ಘನ ಅಧ್ಯಕ್ಷತೆ ಇವರದಾಗಿದ್ದು ಹೆಮ್ಮೆಯ ವಿಚಾರ.

ಪ್ರಸ್ತುತ ಬರವಣಿಗೆಯ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆಯಬೇಕೆಂಬುದೇ ಇವರ ತುಡಿತ.

ಪದ್ಮಜಾ ಜೋಯ್ಸ್

(28 Apr 1971)

BY THE AUTHOR