ಅಗ್ನಿ ರೆಕ್ಕೆಗಳನು ಧರಿಸಿ

Author : ಪದ್ಮಜಾ ಜೋಯ್ಸ್

Pages 1
Published by: ರವೀಂದ್ರ ಪುಸ್ತಕಾಲಯ,
Address: ಚಾಮರಾಜಪೇಟೆ, ಸಾಗರ

Synopsys

ಕವಯತ್ರಿ ಪದ್ಮಜಾ ಅವರ ಕವಿತೆಗಳ ಸಂಕಲನ ’ಅಗ್ನಿ ರೆಕ್ಕೆಗಳನು ಧರಿಸಿ’. ಈ ಸಂಕಲನದ ಕುರಿತು ಹಿರಿಯ ಕವಿ ಎಲ್‌.ಎನ್‌. ಮುಕುಂದರಾಜ್ ಅವರು ’ಪದ್ಮಜಾರವರಿಗೆ ಕವನ ಬರೆಯುವುದು ಒಂದು ಅನಿವಾರ್ಯ ಕಾಯಕವೂ ಹೌದು, ಇತರ ಕೆಲಸಗಳಲ್ಲಿ ದೊರೆಯಲಾರದ ಜೀವಂತ ನೆಮ್ಮದಿ ಈ ಕಾಯಕದಲ್ಲಿ ಕಂಡುಕೊಳ್ಳುತ್ತಿದ್ದರು ಇದು ಆತ್ಮ ವಿಶ್ವಾಸ ತುಂಬುವ ಹವ್ಯಾಸವೂ ಹೌದು. ಆದರೆ ಪದ್ಮಜಾರವರಿಗೆ ಕಾವ್ಯ ಕೌಶಲ್ಯದ ಶಾಸ್ತ್ರೀಯ ಅಧ್ಯಯನವಿಲ್ಲ, ಲೋಕ ನಂಬಿಕೆಯ ಚಿತ್ರಗಳನ್ನೂ ತಮ್ಮ ಪದ್ಯಗಳ ದ್ರವ್ಯವಾಗಿಸಿಕೊಂಡಿದ್ದಾರೆ. ಪದ್ಯ ರಚನೆಯ ಪಾರಮಾರ್ಥಿಕ ಸಾಧ್ಯತೆಗಿಂತ ಭಿನ್ನವಾದ ಲೋಕ ಸಂಕಟಗಳ ಅನಾವರಣ ಇಲ್ಲಿದೆ... ಇದು "ಅಕ್ಕ ಮಹಾದೇವಿಯ ಹಾದಿ". .ಹಲವು ಬಗೆಯ ಸ್ತ್ರೀ ಪರಂಪರೆಯ ನೋವಿನ ಶೋಧನೆಯ ಹಾದಿ, ಹಲವು ಬಗೆಯ ದಾರಿಗಳಲ್ಲಿ ತಮ್ಮ ಅನುಭವಗಳನ್ನು ಬಿಚ್ಚಿ ಹೇಳುತ್ತಾ ತನ್ನನ್ನು ತಾನು ಕಳೆದುಕೊಳ್ಳುವ ಬದಲು ಒಂದು ಏಕಸೂತ್ರ ಧ್ಯಾನಸ್ಥ ಮನಃಸ್ಥಿತಿಯನ್ನು ಪಡೆದುಕೊಂಡಲ್ಲಿ ಪದ್ಮಜಾ ನಿಜವಾಗಿಯೂ ಅತ್ಯುತ್ತಮ ಕವಯಿತ್ರಿ ಅಗಬಲ್ಲರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಪದ್ಮಜಾ ಜೋಯ್ಸ್
(28 April 1971)

ಶಿವಮೊಗ್ಗೆಯ ತೀರ್ಥಹಳ್ಳಿಯವರಾದ ಪದ್ಮಜಾ  ಜೋಯ್ಸ್ ಜನಿಸಿದ್ದು ದರಲಗೋಡು ಎಂಬ ಗ್ರಾಮದಲ್ಲಿ. ತಂದೆ ನಾರಾಯಣ ಜೋಯ್ಸ್ ,ತಾಯಿ ಸ್ವರ್ಣ ಜೋಯ್ಸ್. ಕೋಣಂದೂರು ಮತ್ತು ತೀರ್ಥಹಳ್ಳಿಯ ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿರುವ ಇವರು ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿಯನ್ನು ಪಡೆದು ಅದರಲ್ಲಿಯೇ ಬದುಕು ಕಂಡುಕೊಂಡವರು. ಹಲವು ವರ್ಷ ನೆಲಮಂಗಲದ ರುಡ್ ಸೆಟ್ ನಲ್ಲಿ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸಿದ ಇವರಿಗೆ ಹತ್ತು ಹಲವು ಕ್ರಿಯಾತ್ಮಕ ಹವ್ಯಾಸಗಳಿವೆ. ಸ್ವಂತ ಫಿನಿಕ್ಸ್ ಎಂಬ ಸಂಸ್ಥೆಯ ಕಟ್ಟಿ ಬಹಳಷ್ಟು ಆಸಕ್ತರಿಗೆ ಕರಕುಶಲ ಕಲೆಯ ಕಲಿಸಿದ ಶ್ರೇಯ ಇವರದು. ಓದು ಮತ್ತು ಬರವಣಿಗೆಯ ಬಗ್ಗೆ ತೀರದ ಶ್ರದ್ಧೆ ಇಟ್ಟುಕೊಂಡಿರುವ ಇವರ ಕತೆ, ...

READ MORE

Related Books