About the Author

ಪಲ್ಲವಿ ಬೇಲೂರು ಅವರು ಹಾಸನ ಜಿಲ್ಲೆಯ ಹೂವಿನಹಳ್ಳಿ ಕಾವಲ್ ಗ್ರಾಮದವರು. ತಂದೆ ಗುಂಡುರಾಜ್ ಮತ್ತು ತಾಯಿ ದಾಕ್ಷಾಯಿಣಿ. ಬೇಲೂರು ತಾಲ್ಲೂಕಿನ ದೊಡ್ಡಕೋಡಿಹಳ್ಳಿ ಗ್ರಾಮದ ಮಾರುತಿ.ಕೆ.ಬಿ ಯವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಬೇಲೂರು ತಾಲ್ಲೂಕಿನ ಸ.ಕಿ.ಪ್ರಾ.ಶಾಲೆ. ಮಂಚನಾಯಕನಹಳ್ಳಿ, ಸ.ಹಿ.ಪ್ರಾ.ಬಾಲಕಿಯರ ಶಾಲೆ ಬೇಲೂರು ಹಾಗೂ ಸ.ಕಿ.ಪ್ರಾ.ಶಾಲೆ ಮಲ್ಲನಹಳ್ಳಿ ಶಾಲೆಗಳಲ್ಲಿ 15 ವರ್ಷಗಳಿಂದ  ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ಮುನ್ನೂರಕ್ಕೂ ಹೆಚ್ಚು ಕವನಗಳು ಮತ್ತು ಹಲವಾರು ಲೇಖನಗಳನ್ನು ರಚಿಸಿದ್ದಾರೆ. ಇವರ ಕವನಗಳು ಹಾಗೂ ಲೇಖನಗಳು ರಾಜ್ಯ, ಜಿಲ್ಲೆಯ ಹಲವಾರು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಜನಮನ್ನಣೆ ಗಳಿಸಿವೆ. ಜನಮಿತ್ರ ಪತ್ರಿಕೆ ಯಲ್ಲಿ "ಮಾನಸಿ ಅಂಕಣ" ಹಾಗೂ ಸತ್ಯದ ಹೊನಲು ಪತ್ರಿಕೆಯಲ್ಲಿ "ಮೌನಿ ಕಾಲಂ" ಅಂಕಣ ಬರಹಗಳು ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. 2018 ರಲ್ಲಿ ಇವರ ಚೊಚ್ಚಲ ಕವನ ಸಂಕಲನ ಅಭಿಸಾರಿಕೆ 2022 ರಲ್ಲಿ ಚೈತಾಗ್ನಿ ಕವನ ಸಂಕಲನ ಹಾಗೂ ಲಾಂದ್ರ ಎಂಬ ಕಾದಂಬರಿ ಬಿಡುಗಡೆಯಾಗಿ ಸಾಹಿತ್ಯಾಸಕ್ತರ ಮೆಚ್ಚುಗೆಗಳಿಸಿವೆ. ಹಾಗೆಯೇ ಇವರು ಮುಕ್ತ ಖಂಡಕಾವ್ಯದ ರಚನೆಯಲ್ಲಿ ತೊಡಗಿರುವುದು ವಿಶೇಷ. ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಬೇಲೂರು ತಾಲ್ಲೂಕು ಆಡಳಿತದಿಂದ ತಾಲ್ಲೂಕು "ಕನ್ನಡ ರಾಜ್ಯೋತ್ಸವ ಪ್ರಶಸ್ತಿ ", ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಉತ್ತಮ“ನಲಿಕಲಿ ಶಿಕ್ಷಕಿ ಪ್ರಶಸ್ತಿ” ಮಾಣಿಕ್ಯ ಪ್ರಕಾಶನದ “ಪ್ರತಿಭಾ ಮಾಣಿಕ್ಯ ಪ್ರಶಸ್ತಿ” ರಾಜ್ಯ ವಚನ ಸಾಹಿತ್ಯ ಪರಿಷತ್ತಿನಿಂದ ಅತ್ಯುತ್ತಮ ಕವನ ರಚನೆಗಾಗಿ ಪ್ರಥಮ ಬಹುಮಾನ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಿಂದ ಗೌರವ ಸನ್ಮಾನ ಪಡೆದಿರುತ್ತಾರೆ. ಪ್ರಸ್ತುತ ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಮಹಿಳಾ ಕಾರ್ಯದರ್ಶಿಯಾಗಿ, ಸಾಹಿತ್ಯಾತ್ಮಕ ಕಾರ್ಯಗಳಲ್ಲಿ ತೊಡಗಿರುವ ಇವರು ನವೀನ ರೀತಿಯ ಚಿಂತನೆಗಳಿಂದ, ಸಾಮಾಜಿಕ ತಲ್ಲಣಗಳಿಗೆ ದನಿಯಾಗಿ ಪ್ರಖರವಾಗಿಯೇ ಸಾಹಿತ್ಯದಲ್ಲಿ ಅದನ್ನು ನಿಚ್ಚಳಿಸುವಲ್ಲಿ ಸಮರ್ಥವಾಗಿರುವುದು ಪ್ರಶಂಸನೀಯ.

ಕೃತಿಗಳು: ಅಭಿಸಾರಿಕೆ, ಚೈತಾಗ್ನಿ , ಲಾಂದ್ರ

ಪಲ್ಲವಿ ಬೇಲೂರು