About the Author

ಪರಿಸರ ರಕ್ಷಣೆ, ಪುಸ್ತಕ ಪ್ರೇಮ, ಸಾಹಿತ್ಯ ಕೃಷಿ, ರಂಗಚಟುವಟಿಕೆ, ವೈಚಾರಿಕ ಮುನ್ನೋಟಗಳಂತಹ ನಿರಂತರ ಆಸಕ್ತಿಯನ್ನು ಆಧ್ಯಾತ್ಮದ ಆಳದಲ್ಲಿ ಆಲೋಚಿಸುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಅವರು, 1951 ಸೆಪ್ಟಂಬರ್‌ 04 ರಂದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲ ಗ್ರಾಮದಲ್ಲಿ ಜನಿಸಿದರು. ತಂದೆ ನಾಗಯ್ಯ, ತಾಯಿ ಶಿವನಮ್ಮ. ಕನ್ನಡದ ದಿನ ಪತ್ರಿಕೆಗಳಿಗೆ ಲೇಖನ ಬರೆಯುತ್ತಲೆ ಪ್ರಜಾವಾಣಿಯ ಬಾಳಬುತ್ತಿಯ ಅಂಕಣಕಾರರಾಗಿದ್ದರು. 2004ರ ಹೊಸದುರ್ಗದಲ್ಲಿ ನಡೆದ ‘ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ’ ಅಧ್ಯಕ್ಷತೆ ವಹಿಸಿದ್ದರು. ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಟಕೋತ್ಸವ ನಡೆಸಿದ್ದಾರೆ. 1998ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’, 2004ರಲ್ಲಿ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ‘ಫಾಲ್ ಹ್ಯಾರಿಸ್’ ಪ್ರಶಸ್ತಿ ಲಭಿಸಿದೆ. `ರೊಟ್ಟಿ ಬುತ್ತಿ’ ಸೇರಿದಂತೆ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು