About the Author

ಲೇಖಕ ಪ್ರಕಾಶ್ ಸಿ ರಾವ್ ಅವರು ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ, ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ.

ಕೃತಿಗಳು: ಜನಾರೋಗ್ಯದ ಸವಾಲುಗಳು, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ಆರೋಗ್ಯ ಆಧಾರ: ನೈರ್ಮಲ್ಯ, ಸಕ್ಕರೆ ಕಾಯಿಲೆ ಭಯವೇಕೆ?

ಪ್ರಕಾಶ್ ಸಿ. ರಾವ್