ಜನಾರೋಗ್ಯದ ಸವಾಲುಗಳು

Author : ಪ್ರಕಾಶ್ ಸಿ. ರಾವ್

₹ 60.00




Year of Publication: 2011
Published by: ಚಿಂತನಾ ಪುಸ್ತಕ
Address: #1863, 11ನೇ ಮುಖ್ಯ ರಸ್ತೆ, 38ನೇ ಅಡ್ಡರಸ್ತೆ, 4 ಟಿ. ಬ್ಲಾಕ್ ಜಯನಗರ. ಬೆಂಗಳೂರು-560041
Phone: 9902249150

Synopsys

’ಜನಾರೋಗ್ಯದ ಸವಾಲುಗಳು’ ಲೇಖಕ ಪ್ರಕಾಶ್ ಸಿ. ರಾವ್ ಅವರು ಆರೋಗ್ಯ ಕುರಿತು ಬರೆದ ಲೇಖನ ಕೃತಿ.. ಕೃತಿಗೆ ಬೆನ್ನುಡಿ ಬರೆದಿರುವ ವಸುಂಧರಾ ಭೂಪತಿ ಅವರು, ‘ಪ್ರತಿಯೊಂದು ಅಧ್ಯಾಯದಲ್ಲಿಯೂ ಲೇಖಕರ ಜನಪರ ಕಾಳಜಿ ವ್ಯಕ್ತವಾಗುತ್ತದೆ. ವೈದ್ಯ ವೃತ್ತಿ ವ್ಯಾಪಾರೀಕರಣಗೊಂಡಿರುವ ಇಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಮತ್ತು ಔಷಧಿಗಳ ಜಗತ್ತಿನ ಹಲವು ಆಯಾಮಗಳ ಕುರಿತು ಈ ಕೃತಿ ಅನೇಕ ವಿಷಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ವೃತ್ತಿ ನಿರತ ವೈದ್ಯರು ಓದಲೇಬೇಕಾದಂತಹ ಕೃತಿ ಇದು ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಪ್ರಕಾಶ್ ಸಿ. ರಾವ್

ಲೇಖಕ ಪ್ರಕಾಶ್ ಸಿ ರಾವ್ ಅವರು ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ, ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ಜನಾರೋಗ್ಯದ ...

READ MORE

Related Books