
ಪ್ರಕಾಶ್ ಸಿ. ರಾವ್ ಅವರ ’ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ’ ಈ ಕೃತಿಯು ಆರೋಗ್ಯದ ಕುರಿತ ಬರಹಗಳನ್ನು ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದಿರುವ ವಸುಂಧರಾ ಭೂಪತಿ ಅವರು, ‘ನೋವಿದ್ದಾಗ ಮಾತ್ರೆ ನುಂಗಿ ನಿರಾಳವಾಗಿ ಬಿಡುವ ಅನೇಕರಿಗೆ ಈ ಪುಸ್ತಕ ಎಚ್ಚರಿಕೆ ನೀಡುತ್ತದೆ. ವೈದ್ಯರನ್ನು ಬಲವಂತಪಡಿಸಿ ಇಂಜಕ್ಷನ್ ಹಾಕಿಸಿಕೊಳ್ಳುವ ರೂಢಿ ಇರುವವರನ್ನು ಯೋಚಿಸುವಂತೆ ಮಾಡುತ್ತವೆ ಇಲ್ಲಿನ ಲೇಖನಗಳು. ಪ್ರಕಾಶ್ ಸಿ. ರಾವ್ ಅವರು ಸರಳ ಕನ್ನಡದಲ್ಲಿ ವೈದ್ಯ ವೃತ್ತಿಯಲ್ಲಿ ಕಂಡುಬರುವ ಸಾಮಾನ್ಯ ಸಂಗತಿಗಳನ್ನು ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ. ರೋಗಿಗಳ ಮನೋಧರ್ಮ ಹೇಗಿರುತ್ತದೆಂಬುದರ ಬಗ್ಗೆ ಸೊಗಸಾಗಿ ತಿಳಿಸಿದ್ದಾರೆ. ಅಲ್ಲದೇ, ಕೆಲವು ಘಟನೆಗಳು ಮತ್ತು ರೋಗಿಗಳ ಮಾನಸಿಕ ಸ್ಥಿತಿ ವೈದ್ಯರಿಗೆ ಹೇಗೆ ಸವಾಲಾಗುತ್ತವೆ ಎಂಬುದನ್ನು ವಿವರಿಸಿದ್ದಾರೆ. ಮಾನಸಿಕ ಕಾಯಿಲೆಗಳು ವ್ಯಕ್ತಿಯನ್ನು ದೈಹಿಕ ಕಾಯಿಲೆಗೀಡು ಮಾಡುವುದರ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ. ವೃತ್ತಿಯಲ್ಲಿ ತಾವು ಕಂಡುಂಡ ನೋವು-ನಲಿವುಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.