About the Author

ಲೇಖಕ ಪ್ರಕಾಶ್ ಆರ್. ಕಮ್ಮಾರ ಅವರು ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದವರು. ತಂದೆ ಎಂ. ರಾಮಚಂದ್ರಪ್ಪ ಕಮ್ಮಾರ್, ತಾಯಿ ಮಾನವತಿ ಆರ್. ಕಮ್ಮಾರ್. ಕಲ್ಲೇದೇವರು ಗ್ರಾಮದ ಶ್ರೀ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಗೌರವ                 ಶಿಕ್ಷಕರಾಗಿ, ಸಾಗರದ ಎಚ್. ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತದ         ಖಾಯಂ ಶಿಕ್ಷಕರಾಗಿ 17 ವರ್ಷ ಸೇವೆ ನಂತರ  ಶಿವಮೊಗ್ಗದ ಡಿ.ವಿ.ಎಸ್. ಸಂಯುಕ್ತ ಪ. ಪೂ. ಕಾಲೇಜಿನ ಪ್ರೌಢಶಾಲಾ  ವಿಭಾಗದಲ್ಲಿ ಖಾಯಂ ಶಿಕ್ಷಕರಾಗಿ 7 ವರ್ಷ ಸೇವೆ ನಂತರ  ಮಾರ್ಚ್ 2015 ರಲ್ಲಿ ನಿವೃತ್ತಿಯಾದರು. ನಂತರದ ಮೂರು ವರ್ಷ ಸಂಸ್ಕೃತ ಗ್ರಾಮ ಮತ್ತೂರಿನ ಶಾರದಾ ವಿಲಾಸ  ಹಿ.ಪ್ರಾ. ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ, ತದನಂತರ ( 2016-2019) ಶಿವಮೊಗ್ಗಾದ ಎಸ್. ರಾಮಯ್ಯ ಬಾಲಕಿಯರ  ಪ್ರೌಢಶಾಲೆಯಲ್ಲಿ ಗೌರವ ಶಿಕ್ಷಕರಾಗಿ  ಸೇವೆ ಸಲ್ಲಿಸಿದ್ದಾರೆ.

1992-95 ರಲ್ಲಿ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರ್ಯದರ್ಶಿ, 1995-98 ರಲ್ಲಿ ಸಾಗರ ತಾ. ಕ.ಸಾ.ಪ.ದ ಕಾರ್ಯದರ್ಶಿ, 1998-2001 ರಲ್ಲಿ ಸಾಗರ ತಾ. ಕ.ಸಾ.ಪ.ದ ಕಾರ್ಯದರ್ಶಿಯಾಗಿ ಎರಡನೇ ಬಾರಿ ಆಯ್ಕೆ, 2001-2004 ರಲ್ಲಿ ಸಾಗರ ತಾ. ಕ.ಸಾ.ಪ.ದ ಅಧ್ಯಕ್ಷರಾಗಿ ಆಯ್ಕೆ, 2004-2007 ರಲ್ಲಿ ಸಾಗರ ತಾ. ಕ.ಸಾ.ಪ.ದ ಅಧ್ಯಕ್ಷರಾಗಿ ಎರಡು ಬಾರಿ   ಆಯ್ಕೆ,  2012-2016 ಶಿವಮೊಗ್ಗ ಜಿಲ್ಲಾ ಕಸಾಪ ದ ಕಾರ್ಯಾಲಯ ಕಾರ್ಯದರ್ಶಿಯಾಗಿ ಆಯ್ಕೆ, 2012-2015 ಶಿವಮೊಗ್ಗ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ   ನಿರ್ದೇಶಕರಾಗಿ ಆಯ್ಕೆಯಾದರು.

ಕೃತಿಗಳು  :  ಆಂತರ್ಯ (ಕವನ ಸಂಕಲನ-1997  ಹಾಗೂ 2010), ಬೆಳ್ಳಿಬೆಳಕು (ಮಕ್ಕಳ ಕಥಾ ಸಂಕಲನ-2001), ಬೆಳ್ಳಿಚುಕ್ಕಿ (ಮಕ್ಕಳ ಕವನ ಸಂಕಲನ-2009), ಸಿಂಗಾರ (ಕವನ ಸಂಕಲನ-2010), ಬೆಳ್ಳಕ್ಕಿ ಗೂಡು (ಮಕ್ಕಳ ಕಥಾ ಸಂಕಲನ-2011),  ಕೂರಂಬು (ಹನಿಗವನಗಳ ಸಂಕಲನ-2013),  ಟಿ.ಮಹಾಬಲೇಶ್ವರ ಭಟ್ಟ, ಹಿರಿಯ ಸಾಹಿತಿಗಳು (ವ್ಯಕ್ತಿ ವಿಶೇಷ-2013), ಕೆಳದಿ ಸಂಸ್ಥಾನದ ಅರಸರು (ಐತಿಹಾಸಿಕ ಕಥಾ ಸಂಕಲನ-2013), ಆಧುನಿಕ ವಚನಗಳು - ಭಾಗ-1 , 2013), ದುರ್ಯೋಧನನಿಗೆ ಗೊತ್ತೇ ಆಗಲಿಲ್ಲ (ಮಕ್ಕಳ ಕವನ ಸಂಕಲನ-2014), ಸುರಗಿ (ಕಥಾ ಸಂಕಲನ- 2013), ಹೀಗಾಗುತ್ತೆ ಅಂದ್ಕೊಂಡಿರ್ಲಿಲ್ಲ (ಕವನ ಸಂಕಲನ), ದೇವರು ಈಗೇನು ಮಾಡುತ್ತಿದ್ದಾನೆ? ಮತ್ತು ಇತರೆ ಕಥೆಗಳು (ಮಕ್ಕಳ ಕಥಾ ಸಂಕಲನ, ಮಕ್ಕಳ ಕಥಾ ಮಾಲಿಕೆ - 1 ), ಮನೋಜನ ಗುಜರಿ ಪೆಟ್ಟಿಗೆ ಮತ್ತು ಇತರೆ ಕಥೆಗಳು  (ಮಕ್ಕಳ ಕಥಾ ಸಂಕಲನ- ಮಕ್ಕಳ ಕಥಾ ಮಾಲಿಕೆ - 2 ), ಏಕಿಷ್ಟು ಹತ್ತಿರ? (ಕವನ ಸಂಕಲನ), ಕಥಾ ಶರಧಿ(ಮಕ್ಕಳ 100 ಕಥೆಗಳ ಸಂಕಲನ), ಸಂಪಾದನೆ  :  ಕಾವ್ಯಸಾಗರ (ಕವನ ಸಂಕಲನ-1994), ಮಹಾಬಲ (ಅಭಿನಂದನಾ ಗ್ರಂಥ-1997), ಅನ್ಯೋನ್ಯ (ಅಭಿನಂದನಾ ಗ್ರಂಥ-2016), 

ಪ್ರಶಸ್ತಿ-ಪುರಸ್ಕಾರಗಳು: ವಿಜ್ಞಾನ ಮಿತ್ರ (2000), ಕನ್ನಡಶ್ರೀ - ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕನ್ನಡ ಕೈಂಕರ್ಯಕ್ಕೆ ನೀಡಿದ ಪ್ರಶಸ್ತಿ (2002), ನೀಹಾರಿಕೆ - ಅಭಿನಂದನಾ ಗ್ರಂಥ (ಕಮ್ಮಾರರ 55ರ ಸಂಭ್ರಮ- 2012), ಕನ್ನಡದ ಪರಿಚಾರಕ ಪ್ರಕಾಶ್ ಆರ್. ಕಮ್ಮಾರ್ - 2014 (ವಿ. ಗೇಣೇಶ್ ಅವರು ಕಮ್ಮಾರ್ ರ ಬಗ್ಗೆ ಬರೆದ ಪುಸ್ತಕ), ಶಿವಮೊಗ್ಗ ಟೈಮ್ಸ್’ ಜಿಲ್ಲಾ ದಿನ ಪತ್ರಿಕೆಯಲ್ಲಿ ವಾರದ ಕಥೆಯಾಗಿ ಮಕ್ಕಳಿಗೊಂದು ಕಥೆ  ಅಂಕಣದಡಿ ಇವರ ಸುಮಾರು 200ಕ್ಕೂ ಹೆಚ್ಚು ಮಕ್ಕಳ ಕಥೆಗಳು ಪ್ರಕಟಗೊಂಡಿವೆ  ಅನೇಕ ಬಿಡಿ ಲೇಖನಗಳು, ಕಥೆಗಳು, ಕವನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

 

ಪ್ರಕಾಶ್ ಆರ್. ಕಮ್ಮಾರ್

(01 Apr 1955)