ಆಧುನಿಕ ವಚನಗಳು ಭಾಗ - ೧

Author : ಪ್ರಕಾಶ್ ಆರ್. ಕಮ್ಮಾರ್

Pages 152

₹ 120.00




Year of Publication: 2015
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

’ಆಧುನಿಕ ವಚನಗಳು’ ಕೃತಿಯನ್ನು ಲೇಖಕರಾದ ಪ್ರಕಾಶ್ ಆರ್‍. ಕಮ್ಮಾರ್‍ ಅವರು ರಚಿಸಿದ್ಧಾರೆ. ಲೇಖಕರು ಸಮಾಜವನ್ನು ಮತ್ತು ಅಲ್ಲಿ ನಡೆಯುವ ವಿದ್ಯಮಾನಗಳಿಂದ ಪಡೆದ ಅನುಭವವನ್ನು ತನ್ನ ಅಂತರಂಗಕ್ಕೆ ಸ್ವೀಕರಿಸಿ ಪುನಃ ಸಮಾಜಕ್ಕೆ ಸಾಹಿತ್ಯ ರೂಪದಲ್ಲಿ ಕೊಟ್ಟಿದ್ದಾರೆ.

ಈ ಕೃತಿಯಲ್ಲಿ ನೀತಿ ಬೋಧನೆಯ ಮಾತಿಗಿಂತಲೂ ಆಯಾ ಸಂದರ್ಭ, ಸನ್ನಿವೇಶದ ಅನುಭವಕ್ಕೆ ಪರಿಣಾಮ ಬೀರುವಂತದ್ದು. ಲೇಖಕರ ಮಾತುಗಳು ಕೇವಲ ಮಾತುಗಳಾಗಿ ಉಳಿಯದೆ ಆಯಾ ಸಂದರ್ಭ, ಸನ್ನಿವೇಶವನ್ನು ಕಣ್ಣೆದುರಿಗೆ ಕಟ್ಟಿಕೊಟ್ಟು ಓದುಗನ ಹೃದಯಕ್ಕೆ ತಟ್ಟುವಂತೆ ಮಾಡುತ್ತದೆ. 

About the Author

ಪ್ರಕಾಶ್ ಆರ್. ಕಮ್ಮಾರ್
(01 April 1955)

ಲೇಖಕ ಪ್ರಕಾಶ್ ಆರ್. ಕಮ್ಮಾರ ಅವರು ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದವರು. ತಂದೆ ಎಂ. ರಾಮಚಂದ್ರಪ್ಪ ಕಮ್ಮಾರ್, ತಾಯಿ ಮಾನವತಿ ಆರ್. ಕಮ್ಮಾರ್. ಕಲ್ಲೇದೇವರು ಗ್ರಾಮದ ಶ್ರೀ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಗೌರವ                 ಶಿಕ್ಷಕರಾಗಿ, ಸಾಗರದ ಎಚ್. ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತದ         ಖಾಯಂ ಶಿಕ್ಷಕರಾಗಿ 17 ವರ್ಷ ಸೇವೆ ನಂತರ  ಶಿವಮೊಗ್ಗದ ಡಿ.ವಿ.ಎಸ್. ಸಂಯುಕ್ತ ಪ. ಪೂ. ಕಾಲೇಜಿನ ಪ್ರೌಢಶಾಲಾ  ವಿಭಾಗದಲ್ಲಿ ಖಾಯಂ ಶಿಕ್ಷಕರಾಗಿ 7 ವರ್ಷ ಸೇವೆ ನಂತರ  ಮಾರ್ಚ್ 2015 ರಲ್ಲಿ ನಿವೃತ್ತಿಯಾದರು. ನಂತರದ ಮೂರು ವರ್ಷ ಸಂಸ್ಕೃತ ಗ್ರಾಮ ...

READ MORE

Related Books