ಸುರಗಿ

Author : ಪ್ರಕಾಶ್ ಆರ್. ಕಮ್ಮಾರ್

Pages 128

₹ 100.00




Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ-577429, ಶಿವಮೊಗ್ಗ ಜಿಲ್ಲೆ
Phone: 9448900846

Synopsys

ಕವಿಯಾಗಿ, ಕಥೆಗಾರರಾಗಿ ಪ್ರಸಿದ್ಧರಾಗಿರುವ ಪ್ರಕಾಶ್ ಆರ್. ಕಮ್ಮಾರ್ ಅವರ ಹದಿನೈದು ಸಣ್ಣಕಥೆಗಳು ಇಲ್ಲಿ ಸಂಕಲಗೊಂಡಿವೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಗಮನ ಸೆಳೆದಿರುವ ಇಲ್ಲಿನ ಕಥೆಗಳು ಒಂದೆಡೆ ಮತ್ತೆ ಲಭ್ಯವಾಗಿವೆ.

ಲೇಖಕ ಪ್ರಕಾಶ್ ಆರ್‍. ಕಮ್ಮಾರ್‍ ಅವರ ’ಸುರಗಿ’ಯ ಕಥೆಗಳು ಸಮಕಾಲೀನ ಆರ್ಥಿಕ, ಸಾಮಾಜಿಕ, ರಾಜಕೀಯ, ಹಾಗೂ ಸಾಂಸ್ಕೃತಿಕ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳನ್ನು ತಲ್ಲಣಗೊಳಿಸುತ್ತಿರುವ ಅನೇಕ ಸಂಗತಿಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಿವೆ.

ಬದಲಾಗುತ್ತಿರುವ ಕಾಲದ ಎದುರು ತನ್ನ ಜವಬ್ದಾರಿಯನ್ನೂ, ಕರ್ತವ್ಯ ಪ್ರಜ್ಞೆಯನ್ನೂ ಉಳಿಸಿಕೊಂಡ ಜಾಗೃತ ಮನಸ್ಸೊಂದು ಬದುಕಿನ ಮೌಲ್ಯಗಳನ್ನು ನೆನಪಿಸುವ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ. ಒಂದು ವ್ಯವಸ್ಥೆಯ ಅವಸ್ಥೆಯನ್ನು ಮೀರಲು ಪ್ರಯತ್ನಿಸುವ , ಅನ್ಯಮಾರ್ಗದ ಶೋಧನೆಗೆ ಹಂಬಲಿಸುವ ’ಸುರಗಿ’ಯ ಕತೆಗಳ ಒಳ ತುಡಿತ ಯಾರೂ ಅಪೇಕ್ಷಿಸುವಂಥದ್ದು.

ಸುರಗಿಯಲ್ಲಿರುವ ಪ್ರತಿಯೊಂದು ಕಥಾ ವಸ್ತುವಿನ ಆಯ್ಕೆ, ಪಾತ್ರ ಚಿತ್ರಣ, ಸನ್ನಿವೇಶ ನಿರ್ಮಾಣ, ಮುಂತಾದ ಕಡೆಗಳಲ್ಲಿ ತೋರುವ ಮಿತಿಗಳನ್ನು ಮತ್ತು ಸಡಿಲತೆಯನ್ನು ಮರೆಸುವಂತದ್ದಾಗಿದೆ.

About the Author

ಪ್ರಕಾಶ್ ಆರ್. ಕಮ್ಮಾರ್
(01 April 1955)

ಲೇಖಕ ಪ್ರಕಾಶ್ ಆರ್. ಕಮ್ಮಾರ ಅವರು ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದವರು. ತಂದೆ ಎಂ. ರಾಮಚಂದ್ರಪ್ಪ ಕಮ್ಮಾರ್, ತಾಯಿ ಮಾನವತಿ ಆರ್. ಕಮ್ಮಾರ್. ಕಲ್ಲೇದೇವರು ಗ್ರಾಮದ ಶ್ರೀ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಗೌರವ                 ಶಿಕ್ಷಕರಾಗಿ, ಸಾಗರದ ಎಚ್. ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತದ         ಖಾಯಂ ಶಿಕ್ಷಕರಾಗಿ 17 ವರ್ಷ ಸೇವೆ ನಂತರ  ಶಿವಮೊಗ್ಗದ ಡಿ.ವಿ.ಎಸ್. ಸಂಯುಕ್ತ ಪ. ಪೂ. ಕಾಲೇಜಿನ ಪ್ರೌಢಶಾಲಾ  ವಿಭಾಗದಲ್ಲಿ ಖಾಯಂ ಶಿಕ್ಷಕರಾಗಿ 7 ವರ್ಷ ಸೇವೆ ನಂತರ  ಮಾರ್ಚ್ 2015 ರಲ್ಲಿ ನಿವೃತ್ತಿಯಾದರು. ನಂತರದ ಮೂರು ವರ್ಷ ಸಂಸ್ಕೃತ ಗ್ರಾಮ ...

READ MORE

Related Books