About the Author

ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. 

ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ  ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ಭೋಸ್‌, ಇಟ್ಟ ಹೆಜ್ಜೆ ಮುಂದಕೆ, ಆಡು ಬಾ ಹಾಡು ಬಾ, ಋತಗೀತಗಳು, ಮಕ್ಕಳು ಮತ್ತು ಜಗತ್ತು, ಕನ್ನಡದಲ್ಲಿ ಇಂಗ್ಲೀಷ್‌ ವ್ಯಾಕರಣ ಮುಂತಾದವು. 

ಆರ್.ವಿ. ಭಂಡಾರಿ

(05 May 1936)