ಕಾಡಿನ ಕವಿ

Author : ಆರ್.ವಿ. ಭಂಡಾರಿ

Pages 56

₹ 10.00




Year of Publication: 2004
Published by: ಚಿಂತನ ಉತ್ತರ ಕನ್ನಡ
Address: ℅ ಪಂಡಿತ ಸಾರ್ವಜನಿಕ ಗ್ರಂಥಾಲಯ ಕಟ್ಟಡ, ಶಿರಸಿ, ಉತ್ತರ ಕನ್ನಡ- 581430

Synopsys

‘ಕಾಡಿನ ಕವಿ’ ಲೇಖಕ ಡಾ.ಆರ್. ವಿ. ಭಂಡಾರಿ ಅವರು ರಚಿಸಿರುವ ಕುವೆಂಪು ಸಾಹಿತ್ಯ ಸಮೀಕ್ಷೆ. ಕುವೆಂಪು ಅವರ ಕೃತಿಗಳ ಕುರಿತ ಈ ಕಿರು ಪುಸ್ತಕವನ್ನು ಅವರ ಜನ್ಮ ಶತಮಾನೋತ್ಸವದ ಮುಕ್ತಾಯದ ಹಂತದಲ್ಲಿ ಹೊರತರುತ್ತಿದ್ದೇವೆ ಎಂದಿದ್ದಾರೆ ಚಿಂತನ ಉತ್ತರ ಕನ್ನಡದ ಸಂಚಾಲಕರು. ಜೊತೆಗೆ ಕುವೆಂಪು ಅವರ ಕುರಿತು ಈ ವರ್ಷ ನಾಡಿನಾದ್ಯಂತ ಹತ್ತು ಹಲವು ಪುಸ್ತಕಗಳು ಬಂದಿವೆ. ಇದರೊಂದಿಗೆ ಚಿಂತನ ಉತ್ತರ ಕನ್ನಡದ್ದೂ ಕೂಡ ಒಂದು ಪುಟ್ಟ ಪ್ರಯತ್ನ ಎಂದಿದ್ದಾರೆ. ಇದು ಕುವೆಂಪು ಸಾಹಿತ್ಯವನ್ನು ಸರಳವಾಗಿ, ಅಡಕವಾಗಿ ಹಾಗೂ ಸಮಗ್ರವಾಗಿ ಪರಿಚಯಿಸುವ ಪುಸ್ತಿಕೆ, ಪರಿಚಯದ ಪರಿಚಾರಿಕೆಯನ್ನು ಡಾ.ಆರ್. ವಿ. ಭಂಡಾರಿಯವರು ಸಮರ್ಥವಾಗಿ ನೆರವೇರಿಸಿದ್ದಾರೆ. ಕುವೆಂಪು ಸಾಹಿತ್ಯದ ಪಾಂಡಿತ್ಯ ಪೂರ್ಣ ವ್ಯಾಖ್ಯಾನ ಇಂದು ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಕನ್ನಡದಲ್ಲಿ ಕಾಣಸಿಗುತ್ತದೆ. ಆದರೆ ಶಾಲಾ ಮಕ್ಕಳಿಗೂ ವಿಶೇಷಜ್ಞರಲ್ಲದ ಓದುಗರಿಗೂ ನೆರವಾಗಬಲ್ಲ ಪ್ರಾಥಮಿಕ ಮಾಹಿತಿಯನ್ನು ಸರಳವಾಗಿ ತಿಳಿಸುವ ಪ್ರವೇಶಿಕೆ ಮಾತ್ರ ಅಪರೂಪ ಆರ್.ವಿಯವರ ಹೊತ್ತಿಗೆ ಈ ಹೊತ್ತಿನ ಒಂದು ಅಗತ್ಯವನ್ನು ಪೂರೈಸುತ್ತದೆ ಎಂದಿದ್ದಾರೆ.

About the Author

ಆರ್.ವಿ. ಭಂಡಾರಿ
(05 May 1936)

ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ  ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...

READ MORE

Related Books