About the Author

ಡಾ. ರಾಜಾರಾಮ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐನಕೈನವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೊನ್ನೆಬಾಗ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ.  ಪ್ರಾಕ್ತನಶಾಸ್ತ್ರ ಹಾಗೂ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ವಿಶೇಷ ಅಧ್ಯಯನವನ್ನಾಗಿ ಆಯ್ಕೆಮಾಡಿಕೊಂಡು ತಮ್ಮ ಸ್ನಾತಕೋತ್ತರ ಪದವಿಯನ್ನು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪಡೆದಿರುತ್ತಾರೆ. 1979ರಲ್ಲಿ ‘ಶುಂಗ ಕಾಲದ ಕಲೆ : ಸಾಂಸ್ಕರತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟೊರೇಟ್ ಪದವಿಯನ್ನು ಪಡೆದರು. ಹಂಪಿ, ಇನಾಂಗಾವ್ ಹಾಗೂ ಸನ್ನತಿ ನೆಲೆಗಳ ಉತ್ಖನನದಲ್ಲಿ ಭಾಗವಹಿಸಿದ್ದಾರೆ. 1988ರಿಂದ 2019ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಇ ಅವರ 18 ಪುಸ್ತಕಗಳು ಪ್ರಕಟವಾಗಿವೆ. ‘ಲೌಕಿಕ ಅಲೌಕಿಕ(2001) ಮಾನವಿಕ ವಿಭಾಗದಲ್ಲಿ ‘ಸ್ಮೃತಿ ವಿಸ್ಮೃತಿ ಭಾರತೀಯ ಸಂಸ್ಕೃತಿ(2010) ಅನುವಾದ ವಿಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳು ಸಂದಿವೆ. ಅನೇಕ ಕನ್ನಡ ಹಾಗೂ ಇಂಗ್ಲಿಷ್ ಲೇಖನಗಳು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

 ಕೃತಿಗಳು: ದೇವಿ ಶಕ್ತಿ, ಬ್ರಹ್ಮ, ಭೈರವ, ದಿಕ್ಪಾಲ, ದತ್ತಾತ್ರೇಯ, ಗಣೇಶ, ಗಂಧರ್ವ, ಗಂಗಾ-ಯಮುನಾ, ಗರುಡ, ಕಿನ್ನರ-ಕಿನ್ನರಿ, ಲಕ್ಷ್ಮಿ, ಮಂಟೇಸ್ವಾಮಿ, ಮೈಲಾರ-ಖಂಡೋಬ, ಮೀನಾಕ್ಷಿ, ರೇಣುಕಾ, ವೆಂಕಟೇಶ, ಪಾರ್ವತಿ, ಬೀಳಗಿ ಪ್ರಭುಗಳ ನಾಲ್ಕು ಹೊಸ ಶಾಸನಗಳು, ಸ್ಮೃತಿ-ವಿಸ್ಮೃತಿ ಮತ್ತು ಭಾರತೀಯ ಸಂಸ್ಕೃತಿ  ಇತ್ಯಾದಿ.

ಇತರೆ ಲೇಖಕರೊಂದಿಗೆ ಬರೆದ ಕೃತಿಗಳು: ನಾರಾಯಣ, ಶಿವ, ಸರಸ್ವತಿ, ಸೂರ್ಯ, ಇದ್ದೂ ಇಲ್ಲದಂತಿರುವ ರಹಸ್ಯದ ಕುರಿತು, ಸಾಂಸ್ಕೃತಿಕ ಇತಿಹಾಸದ ಸ್ವೀಕೃತ ಮಾದರಿಗಳು, ವಸಾಹತುಪೂರ್ವ ರಾಜ್ಯ ವ್ಯವಸ್ಥೆ: ಸಿದ್ಧಾಂತಗಳು, ಸಮಸ್ಯೆಗಳು, ಆಧುನಿಕ ಭಾರತದ ಚರಿತರೆ, ಲೇಖನ ಮತ್ತು ಸಿದ್ಧಾಂತಗಳು, ನವ ಮಾನವತಾವಾದದ ಗೊಂದಲಗಳು,   ಪೂರ್ವಾವಲೋಕನ ; ವಸಾಹತು ಪ್ರಜ್ಞೆ:ಮತ್ತು  ಸಂಸ್ಕೃತಿ ಅಧ್ಯಯನ ಇತ್ಯಾದಿ 

ರಾಜಾರಾಮ ಹೆಗಡೆ