About the Author

ಲೇಖಕ ರಾಜಶೇಖರ ಇಚ್ಚಂಗಿ ಅವರು ಗದಗ ಜಿಲ್ಲೆಯ ಬಟ್ಟೂರದವರು. ಅವರು 1957 ಜೂನ್‌ 01ರಂದು ಜನಿಸಿದರು. ಸ್ನಾತಕೋತ್ತರ ಪದವಿ ಪಡೆದಿರುವ ಇವರು ವೃತ್ತಿಯಿಂದ ಪ್ರಾಧ್ಯಾಪಕರು. ‘ಪಾರ್ಶ್ವನಾಥ ಪುರಾಣ-ಒಂದು ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಗಳಿಸಿದ್ದಾರೆ.

ಕೃತಿಗಳು: ಚಿತ್ರ ಸಂಚಯ; ಬೆಟಗೇರಿ ಕೃಷ್ಣಶರ್ಮ, ಶಂಬಾಜೋಶಿ, ಅಣ್ಣಾ ಹಜಾರೆ, ಪಂಡಿತ ಸದಾಶಿವ ಶಾಸ್ತ್ರಿಗಳು- ವ್ಯಕ್ತಿ ಚಿತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕನ್ನಡ-ಕರ್ನಾಟಕ’, ‘ಕೆಲವು ಚಿಂತಕರು’ ಅವರ ವಿಮರ್ಶಾ ಕೃತಿಯಾಗಿದ್ದು ‘ಸಂಸ್ಕೃತಿ ಶೋಧ’ ಅವರ ಸಂಶೋಧನಾ ಕೃತಿ. ‘ಅಡವಿಸಿರಿ’, ‘ಹಿರಣ್ಯ ಗಂಗೋತ್ರಿ’, ‘ಅರ್ಪಣ’, ‘ಬೆಳಗಾವಿ ಬೆಡಗು’ ಅವರ ಸಂಪಾದಿತ ಕೃತಿಗಳು. ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯ. ಅವರ ಮಹತ್ವದ ಕೃತಿ. ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿ ಸನ್ಮಾನ ಮುಂತಾದ ಗೌರವಗಳು ಸಂದಿವೆ.

ರಾಜಶೇಖರ ಇಚ್ಚಂಗಿ