ಡಾ.ಶಂ.ಬಾ. ಜೋಶಿ ವ್ಯಕ್ತಿ ಪರಿಚಯ

Author : ರಾಜಶೇಖರ ಇಚ್ಚಂಗಿ

Pages 32

₹ 10.00




Year of Publication: 2008
Published by: ಕರ್ನಾಟಕ ಜಾನಪದ ಪರಿಷತ್
Address: ನಂ. 1. ಜಲದರ್ಶಿನಿ ಲೇಔಟ್‌, ಎಂ.ಎಸ್‌. ರಾಮಯ್ಯ ಆಸ್ಪತ್ರೆ ಗೇಟ್‌ ಹತ್ತಿರ, ನ್ಯೂ ಬಿಇಎಲ್‌ ರಸ್ತೆ, ಬೆಂಗಳೂರು-560004
Phone: 08023605033

Synopsys

ಶಂಕರರಾವ್ ಬಾಳದೀಕ್ಷಿತ ಜೋಶಿಯವರ ಆಲೋಚನಾ ವಿಧಾನ, ವೈಚಾರಿಕ ನಿಲುವು ಸಂಕೀರ್ಣ ಸ್ವರೂಪದ್ದು.  ಸನಾತನ ಸಾಂಸ್ಕೃತಿಕ ಅಂಶಗಳನ್ನು ದೇಶೀ ನೆಲೆಯಲ್ಲಿ ಅಭಿವ್ಯಕ್ತಿಸಲು ಪ್ರಯತ್ನಿಸುವುದು ಅವರ ರೀತಿ, ಶಂ. ಬಾ. ಜೋಶಿಯವರು ತಮ್ಮ ಸಂಶೋಧನಾ ವಲಯಕ್ಕೆ ಜನಪದ ಸಂಸ್ಕೃತಿಯ ವಿದ್ಯಮಾನಗಳನ್ನು ದುಡಿಸಿಕೊಂಡಿರುವುದು ವಿಶೇಷ. ಸಂಸ್ಕೃತಿ ಮೀಮಾಂಸೆಯಲ್ಲಿ ಶಿಷ್ಟ ಪದದಂತೆ ಜನಪದವನ್ನೂ ಏಕಪ್ರಕಾರವಾಗಿ ಬಳಸಿಕೊಳ್ಳುವುದು ಅವರ ಜಾಯಮಾನ. ಭಾಷಿಕ ಜಾನಪದ, ಸಂಸ್ಕೃತಿ ಜಾನಪದ, ಜನಾಂಗೀಯ ಜಾನಪದಕ್ಕೆ ಸಂಬಂಧಿಸಿದ ಅವರ ಕೆಲವು ಗ್ರಂಥಗಳು ಅಧ್ಯಯನಕಾರರಿಗೆ ಅಕ್ಷಯನಿಧಿಯಾಗಿವೆ. ಡಾ. ಶಂ. ಬಾ. ಜೋಶಿಯವರ ವ್ಯಾಪಕ ಸಂಶೋಧನಾ ವಸ್ತು ವಿಷಯಗಳನ್ನು ಪ್ರಸಿದ್ದ ವಿದ್ವಾಂಸರಾದ ಡಾ. ರಾಜಶೇಖರ ಇಚ್ಚಂಗಿಯವರು ಜೋಶಿ ಅವರು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಮಹತ್ವದ ಕೊಡುಗೆಯನ್ನು ಈ ಪುಸ್ತಕ ಪರಿಚಯಿಸುತ್ತದೆ.

About the Author

ರಾಜಶೇಖರ ಇಚ್ಚಂಗಿ

ಲೇಖಕ ರಾಜಶೇಖರ ಇಚ್ಚಂಗಿ ಅವರು ಗದಗ ಜಿಲ್ಲೆಯ ಬಟ್ಟೂರದವರು. ಅವರು 1957 ಜೂನ್‌ 01ರಂದು ಜನಿಸಿದರು. ಸ್ನಾತಕೋತ್ತರ ಪದವಿ ಪಡೆದಿರುವ ಇವರು ವೃತ್ತಿಯಿಂದ ಪ್ರಾಧ್ಯಾಪಕರು. ‘ಪಾರ್ಶ್ವನಾಥ ಪುರಾಣ-ಒಂದು ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಕೃತಿಗಳು: ಚಿತ್ರ ಸಂಚಯ; ಬೆಟಗೇರಿ ಕೃಷ್ಣಶರ್ಮ, ಶಂಬಾಜೋಶಿ, ಅಣ್ಣಾ ಹಜಾರೆ, ಪಂಡಿತ ಸದಾಶಿವ ಶಾಸ್ತ್ರಿಗಳು- ವ್ಯಕ್ತಿ ಚಿತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕನ್ನಡ-ಕರ್ನಾಟಕ’, ‘ಕೆಲವು ಚಿಂತಕರು’ ಅವರ ವಿಮರ್ಶಾ ಕೃತಿಯಾಗಿದ್ದು ‘ಸಂಸ್ಕೃತಿ ಶೋಧ’ ಅವರ ಸಂಶೋಧನಾ ಕೃತಿ. ‘ಅಡವಿಸಿರಿ’, ‘ಹಿರಣ್ಯ ಗಂಗೋತ್ರಿ’, ‘ಅರ್ಪಣ’, ‘ಬೆಳಗಾವಿ ಬೆಡಗು’ ಅವರ ಸಂಪಾದಿತ ಕೃತಿಗಳು. ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯ. ಅವರ ಮಹತ್ವದ ಕೃತಿ. ಅವರಿಗೆ ಕರ್ನಾಟಕ ಇತಿಹಾಸ ...

READ MORE

Related Books