About the Author

ಲೇಖಕ ರಾಜಶೇಖರ ಬಿರದಾರ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದವರು. ತಂದೆ ಹಣಮಂತ್ರಾಯಗೌಡ ಬಿರಾದಾರ. ತಾಯಿ ಗಂಗಮ್ಮ ಹ. ಬಿರಾದಾರ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಪೇಠ ಅಮ್ಮಾಪುರದಲ್ಲಿ ಪ್ರೌಢಶಿಕ್ಷಣ, ಸುರಪುರದ ಪ್ರಭು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಿ.ಇಡಿ ನಂತರ ಕರ್ನಾಟಕ ವಿ.ವಿ. ಯಿಂದ ಎಂ.ಎ. ಪದವಿ, ತದನಂತರ, ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ.

ಪ್ರಸ್ತುತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ  ಯರಗಟ್ಟಿಯ ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. 

ಕೃತಿಗಳು : ವಚನ ಸಾಹಿತ್ಯ ಮತ್ತು ಸಾಹಿತ್ಯ ಆಸ್ವಾದನೆ.  ಇವರ ‘ಕಾಡುವ ಕಾಡೂರು’ ಲೇಖನವು ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಗದಗ) ಆಯೋಜಿಸಿದ ‘ರಾಜ್ಯ ಮಟ್ಟದ ವಿಮರ್ಶಾ ಲೇಖನ’ ಸ್ಪರ್ಧೆಯ ಪ್ರಥಮ ಬಹುಮಾನ ಪಡೆದಿದೆ.

ರಾಜಶೇಖರ ಬಿರಾದಾರ