About the Author

ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್‍ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್‌ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ  ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್‌.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ.

`ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ (2001) ಪ್ರಶಸ್ತಿ, ದೇವಸೂಗೂರಿನ ನಾಗರ ಎಲ್ಲಮ್ಮ ಭಾಗ-2 ಕೇಂದ್ರ ಗ್ರಂಥಾಲಯಕ್ಕೆ ಆಯ್ಕೆ, (2014) .ಕನ್ನಡ ಭಾಷಾ ವ್ಯಾಸಂಗ ಕೃತಿಗೆ ಅತ್ಯುತ್ತಮ ಕೃತಿ ವಿಜಯಾನಾಗೇಶ ದತ್ತಿನಿಧಿ ಪುಸ್ತಕ ಪ್ರಶಸ್ತಿ. (2015).ಕನಕದಾಸರ ಸಾಹಿತ್ಯದಲ್ಲಿ ವಿಜಯನಗರ ಸಾಮಾಜ್ಯ ಕೃತಿ, ಕಾಗಿನೆಲೆ ಪ್ರಾಧಿಕಾರದಿಂದ ಆಯ್ಕೆ 'ದೀಪ್ತಿ ದರ್ಶಿನಿ' ಕೃತಿಗೆ ಅತ್ಯುತ್ತಮ ಕೃತಿ ಪ್ರಶಸ್ತಿ, ಡಾ. ದೊಡ್ಡರಂಗೇಗೌಡರ, ಶ್ವೇತೆಗಳು ಕವನ ಸಂಕಲನಕ್ಕೆ ಅತ್ಯುತ್ತಮ ವಿಮರ್ಶಾ ಲೇಖನ  ಪ್ರಶಸ್ತಿ ಬಂದಿದೆ.

ಪ್ರತಿಭಾವಂತ ಮಹಿಳೆ, (2002) ವುಮೆನ್‌ ಆಫ್‌ ಎಕ್ಸಲೆನ್ಸಿ (2011) .ಅತ್ಯುತ್ತಮ ಉಪನ್ಯಾಸಕಿ (2011) ಎಕ್ಸಲೆನ್ಸ್ ಅವಾರ್ಡ್ ಫಾರ್ ಸೋಶಿಯಲ್ ಆಕ್ಟಿವಿಟಿ (2018) ದೃಷ್ಟಿದೋಷ ಚೇತನರ ಪ್ರತಿಭಾವಂತ ವೇದಿಕೆ ವತಿಯಿಂದ ಕನ್ನಡ ಕಸ್ತೂರಿ (2019) ಬಾರಿಸು ಕನ್ನಡ ಡಿಂಡಿಮವ, ಕನ್ನಡ ಪರ ಸಂಘಟನೆ, ಕನ್ನಡ ರಾಜ್ಯೋತ್ಸವ ಪ್ರಯುಕ್ತ 'ಕನ್ನಡ ಕೌಸ್ತುಭ' ಪ್ರಶಸ್ತಿಗಳು ಸಂದಿವೆ.

ಗುಲ್ಬರ್ಗ ವಿ. ವಿ. ಯು 'ಡಾ.ರಾಜಶ್ರೀ ಕಿಶೋರ್ ರವರ ಸಮಗ್ರ ಸಾಹಿತ್ಯ ದಲ್ಲಿ ಕಾವ್ಯ' ಎಂಬ ಸಂಶೋಧನಾ ಕಿರು ಪ್ರಬಂಧವನ್ನು ಹೊರತಂದಿದೆ

ರಾಜಶ್ರೀ ಕಿಶೋರ