ನಾಗರ ಎಲ್ಲಮ್ಮ

Author : ರಾಜಶ್ರೀ ಕಿಶೋರ

Pages 104

₹ 100.00




Year of Publication: 2016
Published by: ಶ್ರೀ ಮಾತಾ ನಾಗರ ಎಲ್ಲಮ್ಮ ದೇವಸ್ಥಾನ ಸೇವಾ ಸಮಿತಿ

Synopsys

ನಾಗರ ಎಲ್ಲಮ್ಮ ರಾಜಶ್ರೀ ಕಿಶೋರ ಅವರ ಕೃತಿಯಾಗಿದೆ. ದೇವಸೂಗೂರಿನಲ್ಲಿ ಎಲ್ಲಮ್ಮನನ್ನೂ ನಾಗರರೂಪದಲ್ಲಿ ಪೂಜಿಸುವ ಹಾಗೂ ಎಲ್ಲನ್ನು ಸಂಪ್ರದಾಯದ ವಿವರಗಳನ್ನು ಅಚ್ಚುಕಟ್ಟಾಗಿ ಮಂಡಿಸಿದ್ದಾರೆ. ಈ ಎಲ್ಲಮ್ಮನ ಜಾತಿ, ಜನಾಂಗೀಯ ಮಜಲುಗಳನ್ನು, ಪೋಷಕದಿರುವ ಪೌರಾಣಿಕ ಲಗತ್ತುಗಳೊಡನೆ ತಿಳಿಸಿದ್ದಾರೆ. ಜೋಗಿಗಳ ಸಂಬಂಧ, ಮಳೆ ಬೆಳೆದೇವತೆಯಾಗಿ ಎಲ್ಲಮ್ಮನಿಗೆ ಬಲ ನೀಡುವ, ಪೂಜಾಸಂಪ್ರದಾಯ ತಂದ ಪ್ರಯತ್ನಗಳ ಬಗ್ಗೆಯೂ ಸೂಚಿಸಿದ್ದಾರೆ. ನಾಗರ ಎಲ್ಲಮ್ಮ ಕುರಿತ ಜನಪದ ಹಾಗೂ ಶಿಷ್ಟ ಸಾಹಿತ್ಯವನ್ನು ಪರಿಶ್ರಮ ವಹಿಸಿ ಲೇಖಕಿ ಸಂಗ್ರಹಿಸಿದ್ದಾರೆ. ನಾಗರ ಎಲ್ಲಮ್ಮನ ಕುರಿತ ಉದಯರಾಗದ ಹಾಡಿನಲ್ಲಿ ಬಳಸುವಿಕೆ ಭಾವ ತುಂಬಿದ ಭಾವಣಿಕೆಯ ಕಾವ್ಯದಂತಿದೆ. 'ನಾಡಲ್ಲಾ ನಾಡ ನಿನ ಸುದ್ದಿ ನಾಗರ ಎಲ್ಲವು ಎಂಬ ಸಾಲು ಆಕೆಯ ಕಾರುಣ್ಯ, ಕೃಪಾಕಟಾಕ್ಷ ಅಭಯಹಸ್ತದ ಚಿತ್ರ ನೀಡಿ ಯಾರೆಲ್ಲರಿಗೂ ಹೃದಯ ಸ್ಪಂದನವಾಗುವಂತಿದೆ. ಡಾ. ರಾಜಶ್ರೀ ಕಿಶೋರ ಅವರು ನೇಯ್ದಿರುವ ಹಾಡು ಪ್ರಾಗೈತಿಹಾಸಿಕ ನೆಲೆಯಿಂದ ವರ್ತಮಾನದವರೆಗೆ ದೇವಸೂಗೂರಿನ ವೀರೇಶ ಹಾಗೂ ನಾಗರ ಎಲ್ಲಮರ ಕುರಿತಂತೆ ಆಚರಣೆಗಳ ವೈಭವ ಜಂಗಮಪೂಜೆ, ಶರಣತತ್ವ ಪಾಲನೆ, ವರ್ಣಿಸುವಲ್ಲಿ ಜನಪದ ಹಾಗೂ ಶಿಷ್ಟ ರೂಪದಲ್ಲಿ ಉಯ್ಯಾಲೆಮಾಡಿದೆ. ಒಟ್ಟಾರೆ ಡಾ. ರಾಜಕಿಶೋರಯವರು ತಮ್ಮ ಅಧ್ಯಯನವನ್ನು ಶಿಸ್ತಿನಿಂದ, ಗಂಭೀರವಾಗಿ, ಪ್ರಾಮಾಣಿಕವಾಗಿ, ಸಂಶೋಧನೆ ನಿಷ್ಠೆಯಿಂದ, ದೇವಸೂಗೂರಿನ ಎಲ್ಲಮ್ಮನ ಹಾಗೂ ಆಕೆ ಚೆನ್ನವೀರೇಶನೊಡನೆ, ಭಾವಣಿಕೆಯ ಸೋದರಿಯಾಗಿ ನಡೆದುಕೊಂಡ ಬಗೆಯನ್ನು ಜನಪದ ದೈವಿಕತೆಯನ್ನು ಕುರಿತಂತೆ ಮಾಡಿ ನಮ್ಮ ಮುಂದಿಡಿಸಿದ್ದಾರೆ. ಪ್ರಾಗಿತಿಹಾಸ, ಇತಿಹಾಸ, ಪುರಾಣ, ಸಾಹಿತ್ಯ, ಜನಪದ ಪಾತಳಿಗಳ ಮೂಲಕ ವಸ್ತುನಿಷ್ಠ ಅಧ್ಯಯನವನ್ನು ಲೇಖಕಿಯವರು ಮಾಡಿರುವುದು ವಿಶಿಷ್ಟವೆನಿಸುತ್ತದೆ ಎಂದು ಡಾ.ಎಂ.ಜಿ. ನಾಗರಾಜ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾಜಶ್ರೀ ಕಿಶೋರ

ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್‍ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್‌ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ  ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್‌.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ. `ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ...

READ MORE

Related Books