About the Author

ರಾಜೇಗೌಡ ಹೊಸಹಳ್ಳಿ ಅವರು ಮೂಲತಃ ಹಾಸನ ಜಿಲ್ಲೆ ಆಲೂರು ಬಳಿಯ ಮರಸು ಹೊಸಹಳ್ಳಿಯವರು. ತಂದೆ- ಹೆಚ್.ಎಸ್. ರಂಗಪ್ಪ, ತಾಯಿ- ರಂಗಮ್ಮ. ಹೊಸಹಳ್ಳಿ. 

ಆಲೂರು-ಹಾಸನ ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಶಿಕ್ಷಣ ಪೂರೈಸಿದರು. 1974ರಲ್ಲಿ ಕನ್ನಡ ಎಂ.ಎ ಪದವಿ ಪಡೆದರು. ಆನಂತರ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಅಧಿಕಾರಿಯಾಗಿ ವೃತ್ತಿ ಅನಂತರ 2006ರಲ್ಲಿ ಸ್ವಯಂ ನಿವೃತ್ತಿಯಾದರು. ಈ ನಡುವೆ ಸಾಹಿತ್ಯ ಪ್ರವೃತ್ತಿಯಾಗಿಸಿಕೊಂಡಿದ್ದ ಅವರು ಡಾಕ್ಟರೇಟ್ ಪದವಿಯನ್ನೂ ಪಡೆದರು. 

ಆಳವಾದ ಓದು, ಸಾಹಿತ್ಯದ ಒಡನಾಟವಿರುವ ರಾಜೇಗೌಡ ಹೊಸಹಳ್ಳಿಯವರು ಸತ್ಯಭೋಜರಾಜ, ಮಗನ ತಿಂದ ಮಾರಾಯನ ದುರ್ಗ, ಕೋಳಿ ಮತ್ತು ತುಳಸೀಕಟ್ಟೆ, ಜಾನಪದ ಸಂಕಥನ, ಅಕ್ಕಯ್ಯನ ಸಂಸಾರ, ತಾಳ ಬಂದೋ ತಂಬೂರಿ ಬಂದೋ,ನೋಂದಣಿ ಕೈಪಿಡಿ, ಮಲೆನಾಡ ಸೆರಗಲ್ಲಿ ನಿಂತು, ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಜಾನಪದೀಯತೆ, ಅರಿವಿನ ಕುರುಹು, ಉದರದೊಳು ಹಸಿರುಕ್ಕಿ, ಗಾಂಧಿವಾದಿ ಬಿ.ಎನ್.ಬೋರಣ್ಣಗೌಡ, ಗಾಂಧಿ ಸಂಕಥನ, ದೇವರ ನಾಲಿಗೆಯನ್ನು ಕತ್ತರಿಸುವ ಕಥನ, ಆಧುನಿಕತೆ ಎಂಬ ಮಾಯಾ ಕತ್ತರಿ, ಮಹಾತ್ಮಗಾಂಧಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ರಾಜೇಗೌಡ ಹೊಸಹಳ್ಳಿ

(06 Jul 1949)