ಆಧುನಿಕತೆ ಎಂಬ ಮಾಯಾ ಕತ್ತರಿ

Author : ರಾಜೇಗೌಡ ಹೊಸಹಳ್ಳಿ

Pages 152

₹ 160.00




Year of Publication: 2019
Published by: ನೌಟಂಕಿ
Address: 142, 69ನೇ ಕ್ರಾಸ್, 5ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010

Synopsys

‘ಆಧುನಿಕತೆ ಎಂಬ ಮಾಯಾ ಕತ್ತರಿ’ ಲೇಖಕ ರಾಜೇಗೌಡ ಹೊಸಹಳ್ಳಿ ಅವರ ಲೇಖನ ಸಂಕಲನ. ಆಧುನಿಕತೆಯ ಹೆಸರಲ್ಲಿ ನಡೆಯುತ್ತಿರುವ ಪರಿಸರದ ಮೇಲಿನ ದಾಳಿಯ ಬಗ್ಗೆ, ಪರಿಸರದೊಂದಿಗಿನ ಮನುಷ್ಯರ ಮೃಗೀಯ ವರ್ತನೆಗಳ ಬಗ್ಗೆ ಅರ್ಥಪೂರ್ಣ ಲೇಖನಗಳಿವೆ. ಅಭಿವೃದ್ದಿ ಎಂದರೆ ಜೀವಸಂಕುಲದ ರಕ್ಷಣೆ ಎಂಬುದನ್ನು ಲೇಖಕರು ಸೂಕ್ಷ್ಮವಾಗಿ ವಿವರಿಸಿದ್ದಾರೆ.

About the Author

ರಾಜೇಗೌಡ ಹೊಸಹಳ್ಳಿ
(06 July 1949)

ರಾಜೇಗೌಡ ಹೊಸಹಳ್ಳಿ ಅವರು ಮೂಲತಃ ಹಾಸನ ಜಿಲ್ಲೆ ಆಲೂರು ಬಳಿಯ ಮರಸು ಹೊಸಹಳ್ಳಿಯವರು. ತಂದೆ- ಹೆಚ್.ಎಸ್. ರಂಗಪ್ಪ, ತಾಯಿ- ರಂಗಮ್ಮ. ಹೊಸಹಳ್ಳಿ.  ಆಲೂರು-ಹಾಸನ ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಶಿಕ್ಷಣ ಪೂರೈಸಿದರು. 1974ರಲ್ಲಿ ಕನ್ನಡ ಎಂ.ಎ ಪದವಿ ಪಡೆದರು. ಆನಂತರ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಅಧಿಕಾರಿಯಾಗಿ ವೃತ್ತಿ ಅನಂತರ 2006ರಲ್ಲಿ ಸ್ವಯಂ ನಿವೃತ್ತಿಯಾದರು. ಈ ನಡುವೆ ಸಾಹಿತ್ಯ ಪ್ರವೃತ್ತಿಯಾಗಿಸಿಕೊಂಡಿದ್ದ ಅವರು ಡಾಕ್ಟರೇಟ್ ಪದವಿಯನ್ನೂ ಪಡೆದರು.  ಆಳವಾದ ಓದು, ಸಾಹಿತ್ಯದ ಒಡನಾಟವಿರುವ ರಾಜೇಗೌಡ ಹೊಸಹಳ್ಳಿಯವರು ಸತ್ಯಭೋಜರಾಜ, ಮಗನ ತಿಂದ ಮಾರಾಯನ ದುರ್ಗ, ಕೋಳಿ ಮತ್ತು ತುಳಸೀಕಟ್ಟೆ, ಜಾನಪದ ಸಂಕಥನ, ...

READ MORE

Related Books