About the Author

ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ.  ಅವರು  ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ. 

‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. 

ರಾಜೇಶ್ವರಿ ಕೆ.ವಿ.