About the Author

ಲೇಖಕಿ ರಮಾದೇವಮ್ಮ ಎಸ್. ಕೆ. ಅವರು ಮನಃಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ.  ಪತ್ರಿಕೋದ್ಯಮದಲ್ಲೂ ಡಿಪ್ಲೊಮಾ ಮಾಡಿರುವ ಅವರು ನಿವೃತ್ತ ಉಪಕಾರ್ಯದರ್ಶಿ. ಮೂಲತಃ ಚಿಕ್ಕಮಗಳೂರಿನ ಕಡೂರಿನವರು.  ತಂದೆ ಕೃಷ್ಣರಾವ್ ಎಸ್. ಅವರ ‘ಹೊಂಬೆಳಕು’ ಕವನ ಸಂಕಲನ 2001ರಲ್ಲಿ ಪ್ರಕಟವಾಯಿತು.  'ಎಪ್ಪತ್ತರ ವಯಸು ಇಪ್ಪತ್ತರ ಮನಸು' ಕೃತಿಯಲ್ಲಿ ಅವರ ಆತ್ಮಕಥಾನಕ ಇದೆ.

ರಾಗಭೈರವ, ಏಷ್ಯಾದ ಆಯ್ದ ಕಥೆಗಳು, ಗೋಡೆಗಳಿಂದ ಆಚೆ ಆಕಾಶ, ನಾಯಿಕಾ (ಕಾದಂಬರಿ), ರಷ್ಯನ್ ಆಯ್ದ ಕಥೆಗಳು (ಮಕ್ಕಳ ಕಥೆಗಳು), Prayer and other poerms (ಭಾಷಾಂತರ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ದೆಹಲಿ ಕನ್ನಡ ಸಮ್ಮೇಳನದಲ್ಲಿ ಆಡಳಿತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಪುರಸ್ಕಾರ, ಶಿವರಾಮ ಕಾರಂತರ ಸಮಗ್ರ ಲೇಖನ ಸಂಪುಟಗಳಿಗೆ ಸುಮಾರು 450 ಲೇಖನಗಳನ್ನು ಕಳುಹಿಸಿ ಪ್ರಕಟಣೆಗೆ ನೆರವಾಗಿದ್ದಾರೆ. 

ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1983ನೇ ಸಾಲಿನ ಉತ್ತಮ ಮಕ್ಕಳ ಪುಸ್ತಕ, ಅತ್ತಿಮಬ್ಬೆ ಪ್ರತಿಷ್ಠಾನದಿಂದ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ(2001), ಕರ್ನಾಟಕ ಮಕ್ಕಳ ಸಾಹಿತ್ಯ ಅಕಾಡೆಮಿ ಸಮ್ಮೇಳನದಲ್ಲಿ `ಮಕ್ಕಳ ಭವಿಷ್ಯದ ರೂವಾರಿ' ಪ್ರಶಸ್ತಿಗಳು ಲಭಿಸಿವೆ. 

ರಮಾದೇವಮ್ಮ ಎಸ್. ಕೆ.

Awards