ಏಷ್ಯಾದ ಆಯ್ದ ಕಥೆಗಳು

Author : ರಮಾದೇವಮ್ಮ ಎಸ್. ಕೆ.

Pages 123

₹ 75.00
Year of Publication: 2000
Published by: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ
Address: ಬಿ.ಡಿ.ಎ ಕಾಂಪ್ಲೆಕ್ಸ್‌, ನಂ 72, 28ನೇ ಕ್ರಾಸ್‌ ಸಿದ್ದಣ್ಣ ಲೇಔಟ್‌ , ಬನಶಂಕರಿ 2ನೇ ಹಂತ, ಬೆಂಗಳೂರು- 560070.

Synopsys

'ಏಷ್ಯಾದ ಆಯ್ದ ಕಥೆಗಳು' ಮಕ್ಕಳ ಕಥೆ ಪುಸ್ತಕವನ್ನು ಲೇಖಕಿ ಎಸ್. ಕೆ. ರಮಾದೇವಮ್ಮಅನುವಾದಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಕಿರಿಯ ಓದುಗರಿಗೆ ಒಂದು ಸಂಗ್ರಹ ಎಂಬುದನ್ನು ನಮೂದಿಸಲಾಗಿದೆ. ಇಲ್ಲಿನ ಕತೆಗಳು ಬೇರೆ ಬೇರೆ ಪ್ರದೇಶದ ಕುರಿತಾಗಿದ್ದು, ಈ ಕಾರಣದಿಂದ ಮಕ್ಕಳಿಗೆ ಮನೋರಂಜನೆಯ ಜೊತೆಗೆ ಮಾಹಿತಿಯೂ ಸಿಗುತ್ತದೆ. ಕಥೆಗನುಗುಣವಾಗಿ ಕೆಲವೊಂದು ಚಿತ್ರಗಳನ್ನೂ ಕೂಡ ಈ ಪುಸ್ತಕವು ಹೊಂದಿರುವುದರಿಂದ ಮಕ್ಕಳಿಗೆ ಬಹುಬೇಗನೆ ಇಷ್ಟವಾಗುತ್ತದೆ.

About the Author

ರಮಾದೇವಮ್ಮ ಎಸ್. ಕೆ.

ಲೇಖಕಿ ರಮಾದೇವಮ್ಮ ಎಸ್. ಕೆ. ಅವರು ಮನಃಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ.  ಪತ್ರಿಕೋದ್ಯಮದಲ್ಲೂ ಡಿಪ್ಲೊಮಾ ಮಾಡಿರುವ ಅವರು ನಿವೃತ್ತ ಉಪಕಾರ್ಯದರ್ಶಿ. ಮೂಲತಃ ಚಿಕ್ಕಮಗಳೂರಿನ ಕಡೂರಿನವರು.  ತಂದೆ ಕೃಷ್ಣರಾವ್ ಎಸ್. ಅವರ ‘ಹೊಂಬೆಳಕು’ ಕವನ ಸಂಕಲನ 2001ರಲ್ಲಿ ಪ್ರಕಟವಾಯಿತು.  'ಎಪ್ಪತ್ತರ ವಯಸು ಇಪ್ಪತ್ತರ ಮನಸು' ಕೃತಿಯಲ್ಲಿ ಅವರ ಆತ್ಮಕಥಾನಕ ಇದೆ. ರಾಗಭೈರವ, ಏಷ್ಯಾದ ಆಯ್ದ ಕಥೆಗಳು, ಗೋಡೆಗಳಿಂದ ಆಚೆ ಆಕಾಶ, ನಾಯಿಕಾ (ಕಾದಂಬರಿ), ರಷ್ಯನ್ ಆಯ್ದ ಕಥೆಗಳು (ಮಕ್ಕಳ ಕಥೆಗಳು), Prayer and other poerms (ಭಾಷಾಂತರ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ದೆಹಲಿ ಕನ್ನಡ ಸಮ್ಮೇಳನದಲ್ಲಿ ...

READ MORE

Related Books