ರಷ್ಯಾ ದೇಶದ ಮಕ್ಕಳ ಜಾನಪದ ಕತೆಗಳು

Author : ರಮಾದೇವಮ್ಮ ಎಸ್. ಕೆ.

Pages 176

₹ 24.00




Year of Publication: 2010
Published by: ಸಪ್ನಾ ಬುಕ್ ಹೌಸ್
Address: #3 ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು - 560009

Synopsys

‘ರಷ್ಯಾ ದೇಶದ ಮಕ್ಕಳ ಜಾನಪದ ಕತೆಗಳು’ ಕೃತಿಯು ಎಸ್.ಕೆ ರಮಾದೇವಮ್ಮ ಅವರ ಮಕ್ಕಳ ಸಾಹಿತ್ಯಿಕ ಕೃತಿಯಾಗಿದೆ. 1996ರಲ್ಲಿ ಮೊದಲ ಮುದ್ರಣ ಗೊಂಡಿರುತ್ತದೆ.  ಒಟ್ಟು ಐದು ಕಥೆಗಳಿವೆ. "ಬಿಳಿಯ ಮಂಡಕಾಗೆ ಮತ್ತು ಸುಂಡಿಲಿ" ಕಥೆಯಲ್ಲಿ ಅತಿ ಬುದ್ಧಿವಂತ ಎನಿಸಿಕೊಂಡವರು ಯಾರ ಮಾತನ್ನು ಕೇಳದೆ… ಯಾವ ರೀತಿ ನೈಸರ್ಗಿಕ ವಿಕೋಪಕ್ಕೆ ಸಿಲುಕುತ್ತಾರೆ ಎಂಬ ಪಾಠದ ಸಂದೇಶವಿದೆ: "ಕುರುಡು ಕುದುರ" ಕಥೆಯಲ್ಲಿ ಎಷ್ಟು ಒಳ್ಳೆಯವನಿದ್ದರೂ ಕಾಲಕ್ಕೆ ತಕ್ಕಂತೆ ಬದಲಾಗಿ ಒಂದಾನೊಂದು ಕಾಲದಲ್ಲಿ ತನ್ನ ಪ್ರಾಣ ರಕ್ಷಣೆ ಮಾಡಿದ ಅಚ್ಚು ಮೆಚ್ಚಿನ ಕುದುರೆಗೆ ಕೊಟ್ಟ ಮಾತು ಮರೆತು ಕುದುರೆಯು ಅಸಮರ್ಥವಾದಾಗ, ತನಗೆ ಉಪಯೋಗವಿಲ್ಲ ಎಂಬ ಸ್ವಾರ್ಥಭಾವನೆಯಿಂದ ಅದನ್ನು ಹೊರ ಅಟ್ಟಿ, ಊರಜನ ಹೇಳುವ ನ್ಯಾಯ ಗಣ್ಮರಿಗೆ ಅಚ್ಚುಮೆಚ್ಚು ಎನಿಸುತ್ತದೆ. ‘ಬುದ್ಧಿವಂತ ಸೀಲ್' ಕಥೆಯಲ್ಲಿ ತನಗಿಂತ ಜಾಣರು ಯಾರಿಲ್ಲ ಎಂಬ ಅಹಂನಲ್ಲಿ ಬೇರೆಯವರನ್ನು ಹೀಗಳೆಯುವ ಗುಣವನ್ನು ಆರಿಸಿಕೊಂಡ ಸೀಲ್ ಗೆ ನರಿಯೊಂದು ಎಣಿಕೆಯನ್ನು ಕಲಿಯುವಂತೆ ನಟಿಸಿ ತಕ್ಕಶಾಸ್ತ್ರಿಯನ್ನು ಮಾಡುತ್ತದೆ. ಝಾರ್ವಿಚ್ ಐವನ್ ಮತ್ತು ಬೂದುಬಣ್ಣದ ತೋಳ" ಕಥೆಯಲ್ಲಿ ಮೂರು ಮಕ್ಕಳಲ್ಲಿ ಕೊನೆಯವನು ತಂದೆಗೆ ದಕ್ಷ ಮಗನಾಗಿರುತ್ತಾನೆ. ಬಂಗಾರ ಸೇಬಿನ ಕಳ್ಳನಾದ ಅಗ್ನಿ ಹಂಸನ್ನು ಹಿಡಿದು ತರುವ ದಾರಿಯಲ್ಲಿ ಬೂದುಬಣ್ಣದ ತೋಳ ಕರೆತಂದ ತಪ್ಪಿಗೆ ಮಾಡುವ ಸಹಾಯ ಅದ್ಭುತವಾಗಿದ್ದು, ಸ್ವಾರ್ಥಿ ಅಣ್ಣಂದಿರಿಗೆ ಅಗುವ ಶಿಕ್ಷೆ, ಚಿನ್ನದ ಕೂದಲಿನ ಕುದುರೆ, ಸುಂದರಿ ರಾಜಕುಮಾರಿ ನಿಲಿನಾ ಹಾಗೂ ಎಲ್ಲವನ್ನು ಸಾಧಿಸುವ ಐವಾನ ಕಥೆಯು ಮಕ್ಕಳನ್ನು ರಂಜಿಸುತ್ತದೆ. "ನರಿ ಮತ್ತು ಕರಡಿ" ಈ ಕಥೆಯಲ್ಲಿ ಕರಡಿಯು ಮೋಸಗಾರ ನರಿಯನ್ನು ನಂಬಿ ಆಶ್ರಯ ಕೊಟ್ಟು, ತಾನೇ ಅಪರಾಧಿ ಎನಿಸಿಕೊಳ್ಳುವ ಅದರ ಅವಸ್ಥೆಯು ಮೋಸಗಾರರನ್ನು ಎಂದಿಗೂ ನಂಬದಿರಿ ಎನ್ನುವ ಸಂದೇಶವನ್ನು ಕೊಡುತ್ತದೆ.

About the Author

ರಮಾದೇವಮ್ಮ ಎಸ್. ಕೆ.

ಲೇಖಕಿ ರಮಾದೇವಮ್ಮ ಎಸ್. ಕೆ. ಅವರು ಮನಃಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ.  ಪತ್ರಿಕೋದ್ಯಮದಲ್ಲೂ ಡಿಪ್ಲೊಮಾ ಮಾಡಿರುವ ಅವರು ನಿವೃತ್ತ ಉಪಕಾರ್ಯದರ್ಶಿ. ಮೂಲತಃ ಚಿಕ್ಕಮಗಳೂರಿನ ಕಡೂರಿನವರು.  ತಂದೆ ಕೃಷ್ಣರಾವ್ ಎಸ್. ಅವರ ‘ಹೊಂಬೆಳಕು’ ಕವನ ಸಂಕಲನ 2001ರಲ್ಲಿ ಪ್ರಕಟವಾಯಿತು.  'ಎಪ್ಪತ್ತರ ವಯಸು ಇಪ್ಪತ್ತರ ಮನಸು' ಕೃತಿಯಲ್ಲಿ ಅವರ ಆತ್ಮಕಥಾನಕ ಇದೆ. ರಾಗಭೈರವ, ಏಷ್ಯಾದ ಆಯ್ದ ಕಥೆಗಳು, ಗೋಡೆಗಳಿಂದ ಆಚೆ ಆಕಾಶ, ನಾಯಿಕಾ (ಕಾದಂಬರಿ), ರಷ್ಯನ್ ಆಯ್ದ ಕಥೆಗಳು (ಮಕ್ಕಳ ಕಥೆಗಳು), Prayer and other poerms (ಭಾಷಾಂತರ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ದೆಹಲಿ ಕನ್ನಡ ಸಮ್ಮೇಳನದಲ್ಲಿ ...

READ MORE

Awards & Recognitions

Related Books