About the Author

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕು ಹಿರೇಗುತ್ತಿಯವರಾದ ಇವರು ವೃತ್ತಿಯಲ್ಲಿ ವೈದ್ಯರು. ಪ್ರಸ್ತುತ ಬೆಳಗಾವಿಯ ಕೆ.ಎಲ್.ಇ.ಎಸ್. ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಕ್ರಿಯೆ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2016 ರಿಂದ 2020ರ ವರೆಗೆ ನಿರಂತರವಾಗಿ "ಕರಾವಳಿ ಮುಂಜಾವು" ಪತ್ರಿಕೆಗೆ ಪ್ರತಿವಾರ ವೈದ್ಯಕೀಯ ವಿಚಾರಗಳ ಕುರಿತು ಅಂಕಣಗಳನ್ನು ಬರೆದಿರುವರು. ಅವರ "ವೈದ್ಯ-ವಿಜ್ಞಾನ" ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡಮಿಯ ಶ್ರೇಷ್ಠ ಪುಸ್ತಕ ಪ್ರಶಸ್ತಿ ದೊರೆಕಿದೆ. ರಕ್ತದಾನ, ಹಿಮೋಫಿಲಿಯಾ, ಮಧುಮೇಹ, ಹೃದ್ರೋಗ ಕುರಿತು ಅರಿವು, ಪರಿಸರ ರಕ್ಷಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತ ವೈದ್ಯಕೀಯ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಸದಸ್ಯರಾಗಿದ್ದು, ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಸಭೆ, ಸಮಾವೇಶಗಳಲ್ಲಿ ವೈದ್ಯಕೀಯ ಸಂಬಂಧಿ ವಿಚಾರ ಗಳನ್ನು ಮಂಡಿಸಿರುತ್ತಾರೆ. ವಲಯ ಮಟ್ಟದ ಕ್ರಿಕೆಟಿಗರೂ ಸಹ ಆಗಿದ್ದ ಇವರದು ಬಹು ಮುಖ ಪ್ರತಿಭೆ, ಜನಸಾಮಾನ್ಯರಿಗೆ ವೈದ್ಯಕೀಯ ಸಂಬಂಧಿ ವಿಚಾರಗಳು ಅರ್ಥವಾದಾಗ ಮಾತ್ರವೇ ಚಿಕಿತ್ಸೆ ಸಫಲವಾಗಲು ಸಾಧ್ಯ ಎಂಬ ಬಲವಾದ ನಂಬಿಕೆ ಹೊಂದಿರುವ ಇವರು ವಿಜ್ಞಾನದ ಪಸರಣೆಕಾರ್ಯದಲ್ಲಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಜಾವಾಣಿ ಬಳಗ 2020ರಲ್ಲಿ ಯುವ ಸಾಧಕರಾಗಿ ಇವರನ್ನು ಗುರುತಿಸಿತ್ತು.

ಕೃತಿಗಳು :  ವೈದ್ಯ ವಿಜ್ಞಾನ 2018, ವೈದ್ಯ ದರ್ಪಣ (2019), ವೈದ್ಯ ಮನನ (2020), ವೈದ್ಯ ಮಂಥನ (2021) ತೆರೆದ ಹೃದಯ (2022)

 

ರಣಜಿತ ಬೀರಣ್ಣ ನಾಯ್ಕ ಕೆಂಚನ್‌