About the Author

ರಂಗನಾಥ ಕೃಷ್ಣಾಜಿ ಕುಲಕರ್ಣಿ ಅವರು ಮೂಲತಃ ಮನಗೂಳಿ ಗ್ರಾಮದವರು. ವಿಜಯಪುರದಲ್ಲಿ ಆಂಗ್ಲಭಾಷೆಯಲ್ಲಿ ಬಿ.ಎ. ಪದವಿ, ಕ.ವಿ.ವಿ. ಧಾರವಾಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ಧಾರೆ. ಬಳಿಕ ಇಂಗ್ಲೀಷ್ ನಾಟಕಕಾರ, ಕಾದಂಬರಿಕಾರ ಮತ್ತು ಚಿಂತಕ ಜೆ.ಬಿ. ಪ್ರೀಸ್ಟ್ಲಿಯ ಸಾಹಿತ್ಯ ಕೃತಿಗಳ ಕುರಿತ ಅಧ್ಯಯನದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ಆರ್.ಕೆ. ಕುಲಕರ್ಣಿ ಅವರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ, 1967 ರಿಂದ 1999 ರವರೆಗೆ ವಿಜಯಪುರದ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಕಾಲೇಜುಗಳಲ್ಲಿ ಆಂಗ್ಲಭಾಷೆಯ ಉಪನ್ಯಾಸಕ, ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಬಳಿಕ ಎಸ್.ಬಿ.ಆರ್ಟ್ಸ್ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಹೊಂದಿದ್ದಾರೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಇವರು ಹಲವಾರು ಕವನಗಳನ್ನು ಬರೆದಿದ್ದಾರೆ., ಅನುವಾದಗಳನ್ನು ಮಾಡಿದ್ದಾರೆ. ಕೃತಿಗಳು: ಮುಳ್ಳು ಜಾಜಿ (ಕವನ ಸಂಕಲನ), ಕಾಲಮೀಮಾಂಸೆ (ಚಿಂತನ ಗ್ರಂಥ), ಫುತುಹುತೆ ಅಲಂಗೀರ (ಅನುವಾದ) ಇತ್ಯಾದಿ...

ಆರ್.‌ಕೆ. ಕುಲಕರ್ಣಿ

(01 Jun 1941)