
ಅರವಿಂದರ ಮಹಾಕಾವ್ಯವನ್ನು ಲೇಖಕ ಡಾ. ಆರ್.ಕೆ. ಕುಲಕರ್ಣಿ ಅವರು ʻಸಾವಿತ್ರಿʼ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಾವ್ಯದ ಕೇಂದ್ರ ಪಾತ್ರ 'ಸಾವಿತ್ರಿ' ಮದ್ರ ದೇಶದ ಅರಸ ಅಶ್ವಪತಿಯ ಮಗಳು. ಅಶ್ವಪತಿಯ ಹದಿನೆಂಟು ವರ್ಷಗಳ ಕಠೋರ ತಪಸ್ಸಿನ ಫಲವೆಂಬಂತೆಿ ಪಡೆದುಕೊಂಡದ್ದು ಇವಳನ್ನು. ಮಗಳು ಮದುವೆ ಪ್ರಾಯಕ್ಕೆ ಬಂದ ಮೇಲೆ ಬಾಳಸಂಗಾತಿಯನ್ನು ತಾನೇ ಸ್ವತಃ ಹುಡುಕಿಕೊಂಡು ಹೋಗುವುದು, ಶಾಲ್ವ ದೇಶದ ರಾಜ ದ್ಯುಮತ್ತೇನನ ಮಗ ಸತ್ಯವಾನನ ಮೇಲೆ ಹುಟ್ಟುವ ಪ್ರೀತಿ , ಬಳಿಕ ಸಲ್ಲಾಪ ಹಾಗೂ ಮೃತ್ಯು ಗೆದ್ದು ಅಮರತ್ವ ಸಂಪಾದಿಸುವುದನ್ನು ಲೇಖಕರು ಮನೋಜ್ಞವಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ಅಧ್ಯಾತ್ಮ ಸೌಂದರ್ಯವನ್ನು ಹೆಚ್ಚು ಕಾಣಬಹುದು.
©2025 Book Brahma Private Limited.