About the Author

ಎಸ್.ಸೀತಾರಾಮು- ಹುಟ್ಟಿದ್ದು ಫೆಬ್ರವರಿ 7, 1948ರಂದು ಮೈಸೂರಿನಲ್ಲಿ. 1968ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಮೊದಲನೆಯ ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ. ನವೆಂಬರ್ 1971ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಪ್ರೊಬೇಶನರಿ ಆಫೀಸರ್ ಆಗಿ ಸೇರ್ಪಡೆ. ದೇಶದ ವಿವಿಧ ಸ್ಥಳಗಳಲ್ಲಿ ವಿವಿಧ ಸ್ತರಗಳಲ್ಲಿ ಕೆಲಸಮಾಡಿ ಕೊನೆಯ ನಾಲ್ಕು ವರ್ಷ ಸಿಂಡಿಕೇಟ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಮತ್ತು ಚೀಫ್ ವಿಜಿಲೆನ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿ ಫೆಬ್ರವರಿ 2008ರಲ್ಲಿ ನಿವೃತ್ತಿಯಾದರು. 

ಕಲೆ, ಕನ್ನಡ ಸಾಹಿತ್ಯ, ಭಾರತೀಯ ಸಂಸ್ಕೃತಿ, ದರ್ಶನ ಶಾಸ್ತ್ರ, ಆಧುನಿಕ ಪರಿಪಾಲನಾ ಶಾಸ್ತ್ರ ಮತ್ತು ವರ್ತನ ಶಾಸ್ತ್ರಗಳು-ವಿಶೇಷ ಆಸಕ್ತಿಯ ಕ್ಷೇತ್ರಗಳು. ಕಾಷ್ಟ ಶಿಲ್ಪ ಮತ್ತು ಪೇಪರ್ ಕೊಲಾಜ್ ನಲ್ಲಿ ಪರಿಣಿತಿ. ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ಕರ್ನಾಟಕ ಚಿತ್ರ ಕಲಾ ಪರಿಷತ್ ನಲ್ಲಿ 2009 ಮತ್ತು 2010ರಲ್ಲಿ ಏಕ ವ್ಯಕ್ತಿ ಕಲಾಪ್ರದರ್ಶನ. 

ಅನೇಕ ಕವನ, ಸಣ್ಣಕಥೆ, ಭಾರತೀಯ ತತ್ವಶಾಸ್ತ್ರ, ಸನಾತನ ವಿಜ್ಞಾನ,ಪರಿಪಾಲನಾ ಶಾಸ್ತ್ರಗಳು ಮತ್ತು ಆಧುನಿಕ ವಿಜ್ಞಾನ ಹಾಗೂ ಮ್ಯಾನೇಜ್ ಮೆಂಟ್ ಗಳ ತುಲನಾತ್ಮಕ ಅಧ್ಯಯನ ಮುಂತಾದ ವಿಷಯಗಳ ಮೇಲೆ ಲೇಖನಗಳು ಪ್ರಕಟಿತವಾಗಿವೆ. ಉಪನ್ಯಾಸಗಳನ್ನು ನೀಡುತ್ತಿದ್ದಾರೆ. 

ಪ್ರಕಟಿತ ಕೃತಿಗಳು- ಕದಂಬ, ಮಂದಹಾಸ, ಕವನ ಸಂಕಲನಗಳು- ಅಸಲು-ಫಸಲು, ಬ್ಯಾಂಕ್ ವಂಚನೆಗಳು-ಶೋಧನೆ ಮತ್ತು ನಿಯಂತ್ರಣ, ಅಂತಃಸ್ಸತ್ವ, ಕನಸುಗಳು ಶಾಶ್ವತವಲ್ಲ, ಅರಿವೇ ಶಿವ, ಕುರುಡು ಕಾಂಚಾಣ, ಮ್ಯಾನೇಜ್ ಮೆಂಟ್, ಲೆಸನ್ಸ್-ಫ್ರಮ್ ಭರ್ತೃಹರಿ.

ಎಸ್‍. ಸೀತಾರಾಮು

(07 Feb 1948)