About the Author

ಲೇಖಕಿ ಸಂಕಮ್ಮ ಜಿ. ಸಂಕಣ್ಣನವರ ಅವರು ಬಿ.ಎಸ್ಸಿ. ಹಾಗೂ ಎಂ.ಎ. ಪದವೀಧರರು. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ 10-08-1956 ರಂದು ಜನಿಸಿದರು. ತಂದೆ ಪುಟ್ಟಪ್ಪ ಮೋಟೆ ಬೆನ್ನೂರ, ತಾಯಿ-ಪಾರ್ವತಮ್ಮ.

ಕೃತಿಗಳು: ಜೋಡಿಹಕ್ಕಿ (2004, ಕವನ ಸಂಕಲನ) , ಮುತ್ತಿನ ತೆನೆ (2005,  ಹನಿಗವನ),  ವಚನಸೃಷ್ಟಿ (2005, ಆಧುನಿಕ ವಚನಗಳು), ವಚನ (2010, ಆಧುನಿಕ ವಚನಗಳು), ಸೂರ್ಯಪ್ರಭ (2009), ಅಭಿನಂದನಾ ಗ್ರಂಥ) , ಧರೆಗಿಳಿದ ಧನ್ವಂತರಿ (2009, ಸಂಪಾದನೆ), ಕನ್ನಡದ ಕಣ್ಮಣಿ-2009,  ಡಾ. ಮಹದೇವ ಬಣಕಾರ (2009, ಜೀವನ ಚರಿತ್ರೆ) , ಬ್ಯಾಡಗಿರಾಯರು (2011, ಸಂಪಾದನೆ),  ಹೋರಾಟದ ಒಂದು ನೋಟ (2011, ಸಿದ್ದಮ್ಮ ಮೈಲಾರರ ಬದುಕು). 

ಪ್ರಶಶ್ತಿ-ಗೌರವಗಳು: ನಾಡರತ್ನ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಹಾವೇರಿಯ ಮಹದೇವ ಬಣಕಾರ ಪ್ರತಿಷ್ಠಾನದಿಂದ  ಬಿ.ಜಿ. ಬಣಕಾರದ ಪ್ರಶಸ್ತಿ- (2009), ಅಖಿಲ ಭಾರತ ಕವಿಯತ್ರಿ ಸಂಘ ದಿಂದ (2005) ಕೌದೆ ಅಂಡಾಳ ಪ್ರಶಸ್ತಿ, ಶ್ರೀಮತಿ ಇಂದಿರಾ ಪ್ರಶಸ್ತಿ  ಸಂದಿದೆ.

ಸಂಕಮ್ಮ ಜಿ. ಸಂಕಣ್ಣನವರ

(10 Aug 1956)