About the Author

ಲೇಖಕಿ ಡಾ. ಶಾಂತಲಾ ಎಸ್.ಮುಕ್ಕುಂದಿಮಠ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ತಂದೆ ಪ್ರೊ, ಶಾಶ್ವತಸ್ವಾಮಿ ಮುಕ್ಕುಂದಿಮಠ, ತಾಯಿ ಬಸವರಾಜೇಶ್ವರಿ. ಧನೂರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ನಡೆಯಿತು. ಬಿ.ಎ. ಪದವಿ ಸಿಂಧನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಬಿ.ಎ. ಪದವಿ, ಹಾಗೂ , ರಾಯಚೂರಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ. ಪೂರ್ಣಗೊಂಡಿತು. ಇವರ ’ರೌಡಕುಂದಿ ಪಂಡಿತ ಪ್ರಭಾನಂದರು’  ಕುರಿತ ಪ್ರಬಂದಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್. (ಪ್ರಥಮ ದರ್ಜೆ) ಹಾಗೂ ವಚನ ಸಾಹಿತ್ಯದಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದ ಶರಣ ಹಾವಿನಾಳ ಕಲ್ಲಯ್ಯನವರನ್ನು ಸಾದರಪಡಿಸಿದ 'ಶರಣ ಹಾವಿನಾಳ ಕಲ್ಲಯ್ಯ : ಒಂದು ಅಧ್ಯಯನ" ಮಹಾಪ್ರಬಂಧಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. (2013) ದೊರೆತಿದೆ. ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಕಳೆದ 15 ವರ್ಷಗಳಿಂದ ಕನ್ನಡ ಉಪನ್ಯಾಸಕಿಯಾಗಿದ್ದಾರೆ. 

ಕೃತಿಗಳು: ಶರಣ ಹವಿನಹಾಳ ಕಲ್ಲಯ್ಯ

ಶಾಂತಲಾ ಎಸ್.ಮುಕ್ಕುಂದಿಮಠ

(21 Mar 1975)