ಶರಣ ಹಾವಿನಹಾಳ ಕಲ್ಲಯ್ಯ

Author : ಶಾಂತಲಾ ಎಸ್.ಮುಕ್ಕುಂದಿಮಠ

Pages 260

₹ 250.00




Year of Publication: 2020
Published by: ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ
Address: ನಂ. 52, 'ವಿಶ್ವರೂಪ’. 3 ನೇ ಅಡ್ಡ ರಸ್ತೆ, ಚೇತನಾ ಕಾಲನಿ, ವಿದ್ಯಾನಗರ.
Phone: 9482011406

Synopsys

“ಶರಣ ಹಾವಿನಹಾಳ ಕಲ್ಲಯ್ಯ – ಒಂದು ಅಧ್ಯಯನ" ಡಾ. ಶಾಂತಲಾ ಎಸ್. ಮುಕ್ಕುಂದಿಮಠ ಅವರ ಪಿ.ಎಚ್.ಡಿ. ಸಂಶೋಧನ ಮಹಾಪ್ರಬಂಧವಾಗಿದೆ. ಆರು ಅಧ್ಯಾಯಗಳಲ್ಲಿ ವಿಷಯ ವಿಸ್ತೃತಗೊಂಡಿದ್ದು, ಪ್ರತಿಯೊಂದು ಅಧ್ಯಾಯವು  ಕಲ್ಲಯ್ಯನ ಕುರಿತ ಸಾಧನೆಗಳನ್ನು ಹಾಗೂ ಆತನ ಪವಾಡಗಳನ್ನು ವಿವರಿಸುತ್ತದೆ. ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಕಲ್ಲಯ್ಯ ಅವರ ಸಾಹಿತ್ಯಿಕ ಬದುಕಿನ ಚಿತ್ರಣವೂ ಕೂಡ ಈ ಕೃತಿಯಲ್ಲಿದೆ.

ಕೃತಿಗೆ ಮುನ್ನುಡಿ ಬರೆದಿರುವ ಸಂಶೋಧಕ ಡಾ. ವೀರಣ್ಣ ರಾಜೂರ ಅವರು, ‘ಹಾವಿನಾಳ ಕಲ್ಲಯ್ಯ ಬಸವ ಸಮಕಾಲೀನ ಒಬ್ಬ ಶ್ರೇಷ್ಠ ಶರಣನಾಗಿದ್ದನು. ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿ, ಶರಣ ಚಳವಳಿ ಮತ್ತು ವಚನ ಸಾಹಿತ್ಯಕ್ಕೆ ಉಭಯ ದೃಷ್ಟಿಯಿಂದಲೂ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾನೆ. ಕಲ್ಲಯ್ಯನನ್ನು ಕುರಿತು ಹರಿಹರ ಒಂದು ಸ್ವತಂತ್ರ ರಗಳೆಯನ್ನು ಬರೆಯುವುದರ ಜೊತೆಗೆ ರೇವಣಸಿದ್ದೇಶ್ವರ ರಗಳೆಯಲ್ಲಿಯೂ ಈತನು ಉಲ್ಲೇಖ ಮಾಡಿದ್ದಾನೆ ಎನ್ನುವ ವಿಚಾರಗಳನ್ನು ಲೇಖಕಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಮೊದಲ ಅಧ್ಯಯನವು ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿಯನ್ನು ಒಳಗೊಂಡಿದ್ದು, ಎರಡನೇ ಅಧ್ಯಯನವು 'ಕಲ್ಯಾಣ ನಾಡಿನ ಪರಿಸರ ಮತ್ತು ಹಾವಿನಾಳ ಕಲ್ಲಯ್ಯ' ಶೀರ್ಷಿಕೆಯನ್ನು ಒಳಗೊಂಡಿದೆ. ಇಲ್ಲಿ ಪೂರ್ವ ಯುಗದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಮತ್ತು ಸಾಹಿತ್ಯಕ ಪರಿಸ್ಥಿತಿಯನ್ನು ಕುರಿತು ವಿವರಿಸಿ, ಅದು ಶರಣ ಚಳವಳಿಗೆ ಹೇಗೆ ಪ್ರೇರಕವಾಯಿತು ಎಂಬುದನ್ನು ಸೂಚಿಸಲಾಗಿದೆ. ಮೂರನೇಯ ಅಧ್ಯಾಯವು ಹಾವಿನಾಳ ಕಲ್ಲಯ್ಯನ ಜೀವನ ಮತ್ತು ಸಾಧನೆಗೆ ಮೀಸಲಾಗಿದೆ. ನಾಲ್ಕನೆಯ ಅಧ್ಯಾಯವು ಹೃದಯ ಭಾಗವಾಗಿದ್ದು, ಇಲ್ಲಿ ಕಲ್ಲಯ್ಯನ ಸಮಗ್ರ ವಚನಗಳನ್ನು ವಿಭಿನ್ನ ನೆಲೆಯ ವಿವೇಚನೆಗೆ ಒಳಪಡಿಸಲಾಗಿದೆ. ಐದನೇಯ ಅಧ್ಯಾಯದಲ್ಲಿ ಕಲ್ಲಯ್ಯನ ವಚನಗಳಲ್ಲಿ ತೋರುವ ತತ್ವಜ್ಞಾನ ಮತ್ತು ಅನುಭಾವದ ಸ್ವರೂಪವನ್ನು ಕಾಣಬಹುದು. ಆರನೇಯ ಅಧ್ಯಾಯವು ‘ಸಮಾರೋಪದಲ್ಲಿ’ ಪ್ರಬಂದದ ಒಟ್ಟು ಚಿತ್ರಣವನ್ನು ಸೂತ್ರ ರೂಪದಲ್ಲಿ ಕಟ್ಟಿಕೊಟ್ಟಿದೆ.

About the Author

ಶಾಂತಲಾ ಎಸ್.ಮುಕ್ಕುಂದಿಮಠ
(21 March 1975)

ಲೇಖಕಿ ಡಾ. ಶಾಂತಲಾ ಎಸ್.ಮುಕ್ಕುಂದಿಮಠ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ತಂದೆ ಪ್ರೊ, ಶಾಶ್ವತಸ್ವಾಮಿ ಮುಕ್ಕುಂದಿಮಠ, ತಾಯಿ ಬಸವರಾಜೇಶ್ವರಿ. ಧನೂರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ನಡೆಯಿತು. ಬಿ.ಎ. ಪದವಿ ಸಿಂಧನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಬಿ.ಎ. ಪದವಿ, ಹಾಗೂ , ರಾಯಚೂರಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ. ಪೂರ್ಣಗೊಂಡಿತು. ಇವರ ’ರೌಡಕುಂದಿ ಪಂಡಿತ ಪ್ರಭಾನಂದರು’  ಕುರಿತ ಪ್ರಬಂದಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್. (ಪ್ರಥಮ ದರ್ಜೆ) ಹಾಗೂ ವಚನ ಸಾಹಿತ್ಯದಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದ ಶರಣ ಹಾವಿನಾಳ ಕಲ್ಲಯ್ಯನವರನ್ನು ಸಾದರಪಡಿಸಿದ 'ಶರಣ ಹಾವಿನಾಳ ಕಲ್ಲಯ್ಯ : ...

READ MORE

Related Books