About the Author

ಶಿಕಾರಿಪುರ ಈಶ್ವರ ಭಟ್ಟರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಪತ್ರಕರ್ತರು ಮತ್ತು ಲೇಖಕ, ಸಂಘಟಕ ಕಾರ್ಯಕರ್ತರು. ಸುಮಾರು ಮೂವತ್ತು ವರ್ಷಗಳ ಕಾಲ ಶಿಕಾರಿಪುರ, ಉಡುಪಿ, ಉದ್ಯಾವರ ಮತ್ತು ಮೂಡುಬಿದಿರೆ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, 2021ರಲ್ಲಿ ನಿವೃತ್ತರಾದವರು.

ಶಿಕಾರಿಪುರದ "ಸರ್ವಜ" ಮತ್ತು ಮಂಗಳೂರಿನ "ಹೊಸದಿಗಂತ ಪತ್ರಿಕೆಗಳಲ್ಲಿ ಹವ್ಯಾಸಿ ಪತ್ರಕರ್ತನ ನೆಲೆಯಲ್ಲಿ ದಶಕದ ಸೇವೆ ಸಲ್ಲಿಸಿರುವ ಶಿಕಾರಿಪುರ ಈಶ್ವರಭಟ್ಟರು ಇದುವರೆಗೆ ನೂರಾರು ಲೇಖನ ಸಂದರ್ಶನಗಳನ್ನು ಮಾಡಿದ್ದು, ಅವು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉಡುಪಿಯಲ್ಲಿ ಜರುಗಿದ ವಿರಾಟ್ ಹಿಂದೂ ಸಮಾಜೋತ್ಸವದ ಸವಿನೆನಪಿಗಾಗಿ ಹೊರತಂದ “ಅಮೃತ ಸಿಂಧು" ಮತ್ತು ಹತ್ತು ಪುಸ್ತಿಕೆಗಳು, ಉಡುಪಿಯ ಹಿರಿಯ ಸಮಾಜ ಸೇವಾಕರ್ತ ಎಂ, ಸೋಮಶೇಖರ ಭಟ್ಟರ ಸಹಸ ಚಂದ್ರದರ್ಶನದ ನಿಮಿತ್ತವಾಗಿ ಹೊರತರಲಾದ ಉಡುಪಿಯ “ನಾಲಂದಾದ ನಂದಾದೀಪ” ಮತ್ತು "ದರಪಡಿ" ಮತ್ತು "ರಜತಕಿರಣ” (ಶಾಲಾ ಸ್ಮರಣ ಸಂಚಿಕೆಗಳು) ಹಾಗೂ “ಕೊಜೆಂಟಿಕ್ ಸುತ್ತ-ಮುತ್ತ" ಸೇರಿದಂತೆ ಹತ್ತಾರು ಪುಸ್ತಕಗಳನ್ನು ಶಿಕಾರಿಪುರ ಈಶ್ವರಭಟ್ಟರು ಸಂಪಾದಿಸಿದ್ದಾರೆ. “ಮಹಾಭಾರತ ಪಾತ್ರಾನುಸಂಧಾನ” ಮತ್ತು “ಉಪನಿಷತ್ ದರ್ಶನ" ಇವು ಈಶ್ವರಭಟ್ಟರು ಹೊಸದಿಗಂತಕ್ಕಾಗಿ ಬರೆದ ಲೇಖನಮಾಲೆಗಳು, ಶಿಕಾರಿಪುರ ಈಶ್ವರಭಟ್ಟರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಮಾಧ್ಯಮಿಕ ಶಿಕ್ಷಕ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಹಿಂದಿ ಶಿಕ್ಷಕರ ಸಂಘ, ಉಡುಪಿ ಪತ್ರಕರ್ತರ ಸಂಘ "ಪ್ರೇರಣಾ, ಚಿಂತನ ವೇದಿಕೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು, ಸೇವಾ ಭಾರತಿಯೂ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಸಂಘಟಕ-ಸ್ವಯಂ ಸೇವಕನಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

"ಉಪನಿಷತ್ ದರ್ಶನ" ಶಿಕಾರಿಪುರ ಈಶ್ವರ ಭಟ್ಟರ ಮೊದಲ ಕೃತಿಯಾಗಿದ್ದು “ಮಹಾಭಾರತ ಪಾತ್ರಾನುಸಂಧಾನ" ಎರಡನೆಯ ಕೃತಿಯಾಗಿದೆ...

ಶಿಕಾರಿಪುರ ಈಶ್ವರ ಭಟ್