About the Author

ವೃತ್ತಿಯಲ್ಲಿ ವೈದ್ಯರಾಗಿರುವ ಬರಹಾಸಕ್ತರಾದ ಶಿವಾನಂದ ಮಹಾಗುಂಡಪ್ಪ ಕುಬಸದ ಅವರು ಜನಿಸಿದ್ದು 1957 ಆಗಸ್ಟ್‌ 11ರಂದು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಇವರ ಹುಟ್ಟೂರು. ಪ್ರಸ್ತುತ ಮುಧೋಳದ ಕುಬಸದ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 

ಕಾಲೇಜು ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಕನ್ನಡದ ವಿವಿಧ ದಿನಪತ್ರಿಕೆ, ಹಾಗೂ ನಿಯತಕಾಲಿಕೆಗಳಿಗೆ ವೈದ್ಯಕೀಯ ಲೋಕದ ಲೇಖನಗಳನ್ನು ಬರೆದಿದ್ದಾರೆ. ಗಿಲೋಟಿನ್‌ (ಪ್ರವಾಸ ಕಥನ), ಇಷ್ಟು ಮಾಡಿದ್ದೇನೆ (ಕವನ ಸಂಕಲನ), ನಾಡಿ ಮಿಡಿತದ ದಾರಿ (ವೈದ್ಯ ಲೋಕದ ಅನುಭವ ಕಥನಗಳು) ಇವರ ಪ್ರಮುಖ ಕೃತಿಗಳು.  

ಶಿವಾನಂದ ಕುಬಸದ