ಎಂಟು ಬಣ್ಣದ ಕೌದಿ

Author : ಶಿವಾನಂದ ಕುಬಸದ

Pages 120

₹ 140.00
Year of Publication: 2022
Published by: Aaru Prakashana
Address: SIDRAMESHVAR NAGAR, MUDHOL-587313
Phone: 9448012767

Synopsys

ಶಿವಾನಂದ ಕುಬಸದ ಅವರ ಕವನ ಸಂಕಲನ ಎಂಟು ಬಣ್ಣದ ಕೌದಿ. 75 ಕವನಗಳ ಸಂಕಲನ. ಬದುಕಿಗೆ ಹಲವು ಬಣ್ಣಗಳು. ಸೂರ್ಯನ ಬೆಳಕಲ್ಲಿ ಏಳು. ಬದುಕಿನ ಒಂದೊಂದು ಘಟ್ಟಕ್ಕೂ ಒಂದೊಂದು ಬಣ್ಣವನ್ನು ಅನುಭವಿಸುತ್ತಾ ಆಸ್ವಾದಿಸುತ್ತಾ ಸಾಗುವುದು ಆಪ್ಯಾಯಮಾನ. ನಾವು ಬಯಸಿದ್ದು ಬಾರದಿದ್ದಾಗ, ಬಯಸದ್ದು ಆಯಾಚಿತವಾಗಿ ದೊರಕಿದಾಗ , ಬದುಕಿನ ಹಲವು ವಿಷಯಗಳು ಅಚ್ಚರಿ, ಸಂತೋಷ, ಸುಖ, ಆಘಾತ ನೀವಿದಾಗ ಎಂಟನೆಯ ಬಣ್ಣದ ಸಾಕ್ಷಾತ್ಕಾರವಾಗುತ್ತದೆ. ಆ ಎಂಟನೆಯ ಬಣ್ಣವೆ ಮನದಾಳಕ್ಕಿಳಿದು ಕವಿತೆ ಬರೆಯಲು ಪ್ರೇರಣೆಯಾಗುತ್ತದೆ. ಆ ಎಂಟನೇ ಬಣ್ಣದ ಪ್ರತಿರೂಪವೇ ಈ ಕವನ ಸಂಕಲನ.

About the Author

ಶಿವಾನಂದ ಕುಬಸದ

ವೃತ್ತಿಯಲ್ಲಿ ವೈದ್ಯರಾಗಿರುವ ಬರಹಾಸಕ್ತರಾದ ಶಿವಾನಂದ ಮಹಾಗುಂಡಪ್ಪ ಕುಬಸದ ಅವರು ಜನಿಸಿದ್ದು 1957 ಆಗಸ್ಟ್‌ 11ರಂದು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಇವರ ಹುಟ್ಟೂರು. ಪ್ರಸ್ತುತ ಮುಧೋಳದ ಕುಬಸದ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.  ಕಾಲೇಜು ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಕನ್ನಡದ ವಿವಿಧ ದಿನಪತ್ರಿಕೆ, ಹಾಗೂ ನಿಯತಕಾಲಿಕೆಗಳಿಗೆ ವೈದ್ಯಕೀಯ ಲೋಕದ ಲೇಖನಗಳನ್ನು ಬರೆದಿದ್ದಾರೆ. ಗಿಲೋಟಿನ್‌ (ಪ್ರವಾಸ ಕಥನ), ಇಷ್ಟು ಮಾಡಿದ್ದೇನೆ (ಕವನ ಸಂಕಲನ), ನಾಡಿ ಮಿಡಿತದ ದಾರಿ (ವೈದ್ಯ ಲೋಕದ ಅನುಭವ ಕಥನಗಳು) ಇವರ ಪ್ರಮುಖ ಕೃತಿಗಳು.   ...

READ MORE

Related Books