About the Author

ಕಾವ್ಯಾನಂದ ಕಾವ್ಯನಾಮಾಂಕಿತ ಸಿದ್ಧಯ್ಯ ಪುರಾಣಿಕ ಅವರು ಜನಿಸಿದ್ದು 1918 ಜೂನ್ 18ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಯಲಬುರಗಿ ತಾಲ್ಲೂಕಿನ ದ್ಯಾಂಪುರ. ಕಲಬುರ್ಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮೆಟ್ರಿಕ್ ಹಾಗೂ ಪದವಿ ಶಿಕ್ಷಣ ಪಡೆದಿದ್ದರು.  ತಹಸೀಲ್ದಾರರಾಗಿ ವೃತ್ತಿ ಆರಂಭಿಸಿದ್ದ ಇವರು ಸರ್ಕಾರದ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿ ಲೇಬರ್ ಕಮೀಷನರಾಗಿ ಕೆಲಸ ಮಾಡಿ ನಿವೃತ್ತರಾದರು. 

ಇವರಿಗೆ ಭಾರತೀಯ ಭಾಷಾ ಪರಿಷತ್ತಿನಿಂದ ಪ್ರಥಮ ಬಿಲ್ವಾರ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.  ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕಲಬುರ್ಗಿಯಲ್ಲಿ ನಡೆದ ಐವತ್ತೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕಾಗಿ ಅವಿರತವಾಗಿ ಶ್ರಮಿಸಿದ್ದ ಸಿದ್ದಯ್ಯ ಪುರಾಣಿಕ ಅವರು 1994 ರ ಸೆಪ್ಟಂಬರ್ 5 ರಂದು ನಿಧನರಾದರು.

ಇವರು ಬರೆದ ಕೃತಿಗಳೆಂದರೆ ರಜತ ರೇಖೆ (ಪ್ರಸಾರ ನಾಟಕಗಳು) ಶರಣ ಚರಿತಾಮೃತ (ಜೀವನ ಚರಿತ್ರೆ), ಭಾರತವೀರ (ಮೂರು ಅಂಕಗಳ ನಾಟಕ) ತ್ರಿಭುವನಮಲ್ಲ (ಐತಿಹಾಸಿಕ ಕಾದಂಬರಿ), ಸಿದ್ದರಾಮ, ಹರ್ಡೇಕರ್ ಮಂಜಪ್ಪ, ಮಿರ್ಜಾಗಾಲಿಬ್ (ಜೀವನ ಚರಿತ್ರೆಗಳು) 'ಸುಬೋಧಸಾರ' (ಸಂಪಾದಿತ ಕೃತಿ) ಆತ್ಮಾರ್ಪಣ (ರಂಗನಾಟಕ), ತುಪ್ಪಾ ರೊಟ್ಟಿಗೆ ಗೇ ಗೇ, ಗಿಲ್ ಗಿಲ್ ಗಿಲಗಚ್ಚಿ, ತಿರುಗಿ ತಿರುಗಲೆ ತಿರುಗುಯ್ಯಾಲೆ (ಶಿಶು ಸಾಹಿತ್ಯ), ಕಾವ್ಯಾನಂದ, ಮಾನಸ ಸರೋವರ, ವಚನೋಧ್ಯಾನ, ಕರುಣಾ ಶ್ರವಣ, ಮೊದಲು ಮಾನವನಾಗು, ಜಲಪಾತ ಮುಂತಾದವು.

ಸಿದ್ಧಯ್ಯ ಪುರಾಣಿಕ

(18 Jun 1918-05 Sep 1994)

BY THE AUTHOR