About the Author

ಯುವ ಬರಹಗಾರ ಸೋಮು ರೆಡ್ಡಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೇಸನೂರ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ ಹನ್ನೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಇವರ ಪ್ರಮುಖ ಕೃತಿಗಳೆಂದರೆ ಅಭಿನೇತ್ರಿ (ಕಾದಂಬರಿ), ನೋಟದಾಗ ನಗೆಯಾ ಮೀಟಿ (ಕಥಾ ಸಂಕಲನ), ತಲಾಷ್ (ನಾಟಕ) ಇವರ ಪ್ರಕಟಿತ ಕೃತಿಗಳಾಗಿವೆ.

ಇವರಿಗೆ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ, ಕ್ರಾಂತಿ ಪುರಸ್ಕಾರ, ಶ್ರೀ ಮಹಿಮಾ ಕೌಸ್ತುಭ ಪುರಸ್ಕಾರ, ಚೇತನ ಸಾಹಿತ್ಯ ಪುರಸ್ಕಾರ, ಜೇಂಟ್ಸ್ ರಂಗ ಸಂಘಟಕ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಸಿನಿಮಾ, ರಂಗಭೂಮಿಯ ಕಡೆಗೆ ವಿಶೇಷ ಆಸಕ್ತಿ ಹೊಂದಿರುವ ಇವರು ಗೀತರಚನೆ, ಕಿರುಚಿತ್ರ ನಿರ್ದೇಶನ, ನಾಟಕ ನಿರ್ದೇಶನ ಮಾಡಿರುತ್ತಾರೆ. ಇವರ ತಲಾಷ್ ನಾಟಕವು ಹುಬ್ಬಳ್ಳಿಯ ಜೀವಿ ಕಲಾ ಬಳಗದ ವತಿಯಿಂದ ರಾಜ್ಯಾದ್ಯಂತ ಹಲವು ಪ್ರದರ್ಶನಗಳನ್ನು ಕಂಡಿದೆ. 

ಸೋಮು ರೆಡ್ಡಿ

(06 Jan 1987)