
ಲೇಖಕ ಸೋಮು ರೆಡ್ಡಿ ಅವರ ನಾಟಕ ಕೃತಿ ʻದ್ವಂದ್ವʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ವರ್ತಮಾನದ ಪರಿಮಳ ಅಂಟಿಕೊಂಡಿರದ ಯಾವುದೇ ವಿಷಯ ಮತ್ತು ವಿಚಾರವನ್ನು ಅಭಿವ್ಯಕ್ತಿಸಲೇಬಾರದೆಂಬ ನನ್ನ ನಿಲುವು ಒಡಮೂಡಲು ಕಾರಣ ನಮ್ಮ ಕನ್ನಡ ಪೂರ್ವಸೂರಿಗಳ ನಾಟಕಗಳ ಎಡಬಿಡದ ಅಧ್ಯಯನವೇ ಹೊರತು ಮತ್ಯಾವುದೂ ಅಲ್ಲ, ಸೃಜನಶೀಲ ಅಭಿವ್ಯಕ್ತಿ ಆಯಾ ಕಾಲ, ದೇಶ, ಪರಿಸರದ ಅನುಗುಣವಾಗಿ ವಸ್ತು ಮತ್ತು ಕಥನ ಕಟ್ಟಿ ಸಾಹಿತ್ಯವಾಗಿ ರೂಪುಗೊಂಡ ಕೃತಿ ಕಾಲಕ್ಕೆ ತಕ್ಕಹಾಗೆ ಪ್ರತಿಕ್ರಿಯಿಸುತ್ತಾ ಸಮಕಾಲೀನವಾಗಿರುವ ಮತ್ತು ಆಯಾ ವಸ್ತುವಿಷಯದ ಸತ್ವ-ಸ್ವಾರಸ್ಯದ ಮೇಲೆ ಸಾರ್ವಕಾಲಿಕವಾಗಿರುವ ಹಲವಾರು ನಿದರ್ಶನಗಳು ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾಣಸಿಗುತ್ತವೆ. ನಮ್ಮ ನಿತ್ಯ ಬದುಕಿನ ದಂದುಗ, ರಗಳೆ-ರಾದ್ದಾಂತ, ರೋಗ-ರುಜಿನ, ಸಂಘರ್ಷ, ಆಸೆ, ಆಕರ್ಷಣೆ, ಪ್ರೀತಿ, ವ್ಯಾಮೋಹ, ಮಮತೆ, ಕರುಣೆ ಈ ಎಲ್ಲವನ್ನೂ ಸಂಕಲಿಸಿದ ನಾಟಕ ದ್ವಂದ್ದ” ಎಂದು ಹೇಳಿದ್ದಾರೆ.
©2025 Book Brahma Private Limited.