ತಲಾಷ್

Author : ಸೋಮು ರೆಡ್ಡಿ

Pages 116

₹ 100.00




Year of Publication: 2018
Published by: ದಾಕ್ಷಾಯನಿ ಪ್ರಕಾಶನ
Address: #148/1, ವೀಣೇಶಮಣ್ಣ ರಸ್ತೆ, ಮೈಸೂರು- 570004

Synopsys

ಲೇಖಕ ಸೋಮು ರೆಡ್ಡಿ ಅವರ ನಾಟಕ ಕೃತಿ ʻತಲಾಷ್‌ʼ. ಪುಸ್ತಕದ ಕುರಿತು ಲೇಖಕರು, “ಈ ನಾಟಕದಲ್ಲಿ ಬರುವ ಎಲ್ಲಾ ಸನ್ನಿವೇಶಗಳು ಕೇವಲ ಕಾಲನಿಕವಾಗಿವೆ. ಇಲ್ಲಿನ ಎಲ್ಲಾ ಪಾತ್ರಗಳ ಹುಟ್ಟಿಗೆ ಕಾರಣ ನನ್ನ ಬಾಲ್ಯದ ಪರಿಸರ. ಅಂದಿನ ದಿನಗಳಲ್ಲಿ ಕೆಳವರ್ಗದ ಜನರನ್ನು ಹಿಂಸಿಸಿದ ಪರಿ, ಈಗಿನ ಕಾಲದವರೆಗೂ ಅಲ್ಲಲ್ಲಿ ಮುಂದುವರೆದಿದ್ದು ಈ ನಾಟಕದಲ್ಲಿ ಪ್ರಮುಖ ಅಂಶವಾಗಿ ಬಳಸಿದ್ದೇನೆ. ಸಮಾಜಕ್ಕೆ ಸ್ಪಂದಿಸುವ ತುಡಿತವೋ? ಅಥವಾ ಸಮಾನತೆ ಸಮಾಜ ಕಟ್ಟುವ ಹಪಹಪಿಯೋ? ಗೊತ್ತಿಲ್ಲ. ನಾನಿಲ್ಲಿ ಜಾತ್ಯಾತೀತತೆಯನ್ನು ಅಭಿವ್ಯಕ್ತಿಪಡಿಸಿದ್ದೇನೆ. ಜೊತೆ ಜೊತೆಗೆ ಮೌಢ್ಯವನ್ನು ವಿರೋಧಿಸಿದ್ದೇನೆ. ಮನುಷ್ಯನ ಅವಗುಣಗಳಾದ ದುರಾಸೆ, ಲಾಲಸೆ, ಲಂಚಗುಳಿತನ, ಕಾಮ, ದ್ರೋಹ ಎಂಬಿತ್ಯಾದಿಗಳುಮತ್ತು ಅವು ಪಡೆದುಕೊಳ್ಳುವ ಸ್ವರೂಪಗಳಿಂದಾಗುವ ದುರಂತಗಳ ಬಗೆಗೆ ಇಲ್ಲಿ ವಿವರಿಸಲು ಯತ್ನಿಸಿದ್ದೇನೆ. ಈ ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬಾಳಿ ಬದುಕಬೇಕು. ನೆಮ್ಮದಿಯ ಜೀವನಕ್ಕೆ ಕುತ್ತು ತರುವ ಜಾತಿ, ಧರ್ಮಗಳ ಗೊಡುವೆ ಬಿಟ್ಟು ಮನುಷ್ಯತ್ವ ಉಳಿಯಬೇಕು ಎಂಬುದು ಒಟ್ಟು ಈ ನಾಟಕದ ಆಶಯವಾಗಿದೆ” ಎಂದು ಹೇಳಿದ್ದಾರೆ.

About the Author

ಸೋಮು ರೆಡ್ಡಿ
(06 January 1987)

ಯುವ ಬರಹಗಾರ ಸೋಮು ರೆಡ್ಡಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೇಸನೂರ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ ಹನ್ನೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ಅಭಿನೇತ್ರಿ (ಕಾದಂಬರಿ), ನೋಟದಾಗ ನಗೆಯಾ ಮೀಟಿ (ಕಥಾ ಸಂಕಲನ), ತಲಾಷ್ (ನಾಟಕ) ಇವರ ಪ್ರಕಟಿತ ಕೃತಿಗಳಾಗಿವೆ. ಇವರಿಗೆ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ, ಕ್ರಾಂತಿ ಪುರಸ್ಕಾರ, ಶ್ರೀ ಮಹಿಮಾ ಕೌಸ್ತುಭ ಪುರಸ್ಕಾರ, ಚೇತನ ಸಾಹಿತ್ಯ ಪುರಸ್ಕಾರ, ಜೇಂಟ್ಸ್ ...

READ MORE

Related Books