About the Author

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದರು. ಕಲಿತದ್ದು  ಎಂಜಿನಿಯರಿಂಗ್ ಆದರೂ ಕನ್ನಡದ ಬಗ್ಗೆ ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆ ಆಸಕ್ತಿಯೂ ಹೊಂದಿದ್ದಾರೆ.
ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿರುವ ಶ್ರೀವತ್ಸ ಜೋಶಿ ಕನ್ನಡದ ಪ್ರಸಿದ್ಧ ಪತ್ರಿಕೆಗಳ ಅಂಕಣ ಬರಹಗಾರರಾಗಿಯೂ ಕೂಡ ಹೆಸರು ಮಾಡಿದ್ದಾರೆ.
ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಇವರು ದಟ್ಸ್ ಕನ್ನಡ.ಕಾಮ್ ಅಂತರ್ಜಾಲ ಕನ್ನಡ ಪತ್ರಿಕೆಯಲ್ಲಿ ಸತತ ಐದು ವರ್ಷಗಳ ವರೆಗೆ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣವನ್ನು ಬರೆದಿದ್ದಾರೆ.
ನಂತರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಹೆಸರಿನ ಅಂಕಣವನ್ನು ಬರೆಯುತ್ತಿದ್ದರು. ಪ್ರಸ್ತುತ ವಿಶ್ವವಾಣಿ ಪತ್ರಿಕೆಯಲ್ಲಿ ತಿಳಿರು ತೋರಣ ಹೆಸರಿನ ಸಾಪ್ತಾಹಿಕ ಅಂಕಣವನ್ನು ಬರೆಯುತ್ತದ್ದಾರೆ.
 ವಾಷಿಂಗ್ಟನ್ನ ಕಾವೇರಿ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಶ್ರೀವತ್ಸ ಜೋಶಿ, ಮಾಧ್ಯಮಸಂಪರ್ಕ ವಿಬಾಗಗಳಲ್ಲಿ ಕಾರ್ಯನಿರ್ವಹಣೆ ಮಾಡಿದ ಅನುಭವವಿದೆ. 
ಅವರ ಅಂಕಣಗಳು ಧ್ವನಿ ಮಾಧ್ಯಮದಲ್ಲಿಯೂ ಮೂಡಿಬರುತ್ತಿದ್ದು, ಅಂತಹ ಮೊದಲ ಕನ್ನಡ ಅಂಕಣ ಎನಿಸಿಕೊಂಡಿದೆ.
ವಿದೇಶಿ ನೆಲದಲ್ಲಿ ಕುಳಿತು ಕನ್ನಡ ಮಾಧ್ಯಮ ವೇದಿಕೆಗಳಿಗೆ ಸತತ ಸಾಪ್ತಾಹಿಕ ಅಂಕಣ ಬರೆದಿದ್ದಾರೆ, ಬರೆಯುತ್ತಿದ್ದಾರೆ. ಇಷ್ಟು ದೀರ್ಘ ಕಾಲ ಕನ್ನಡ ಕಾಲಂ ನಿಭಾಯಿಸಿದ ಅನಿವಾಸಿ ಲೇಖಕ ಗೌರವ ಅವರಿಗೆ ಮಾತ್ರ ಸಲ್ಲುತ್ತದೆ.

ಶ್ರೀವತ್ಸ ಜೋಶಿ