ಇನ್ನೊಂದಿಷ್ಟು ವಿಚಿತ್ರಾನ್ನ

Author : ಶ್ರೀವತ್ಸ ಜೋಶಿ



Published by: ಗೀತಾ ಬುಕ್ ಹೌಸ್, ಮೈಸೂರು

Synopsys

ದಟ್ಸ್ ಕನ್ನಡ ಡಾಟ್ ಕಾಮ್ ನಲ್ಲಿ ಪ್ರಕಟವಾದ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣದ ಆಯ್ದ ಲೇಖನಗಳ ಸಂಗ್ರಹವೇ ಇನ್ನೊಂದಿಷ್ಟು ವಿಚಿತ್ರಾನ್ನ ಪುಸ್ತಕ. ತಮ್ಮ ಲೇಖನಗಳಿಗೆಆಯ್ದುಕೊಳ್ಳುವ ವಿಷಯ ವಸ್ತುಗಳ ವೈವಿಧ್ಯ, ನವಿರಾದ ಹಾಸ್ಯಮಿಶ್ರಿತ ಸರಳ ಭಾಷೆಯ ಶೈಲಿ ಮತ್ತು ದೈನಂದಿನ ಆಗುಹೋಗುಗಳಲ್ಲಿ ಹಾಸುಹೊಕ್ಕಾಗಿರುವ ಸಂಗತಿಗಳಲ್ಲೇ ಸ್ವಾರಸ್ಯವನ್ನು ಹುಡುಕಿ ತೋರಿಸುವ ಪರಿಯಿಂದಾಗಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಷ್ಟೋ ಸರ್ತಿ ಲೇಖನದ ತಲೆಬರಹವೇ ಓದುವಂತೆ ಪ್ರೇರೇಪಿಸುತ್ತದೆ. ಆರಂಭಿಕ ಹಂತದಲ್ಲೇ ಓದುಗರ ಮನಸ್ಸನ್ನು ಹೈಜಾಕ್ ಮಾಡುತ್ತದೆ. ಕೊನೆತನಕ ಸಲೀಸಾಗಿ ಓದಿಸಿ ಅನುಪಮ ಆನಂದಕ್ಕೆ, ಹದವಾದ ಹಿತಾನುಭವಕ್ಕೆ ಕಾರಣವಾಗುತ್ತದೆ. ಓದುಗರನ್ನು ನಕ್ಕುನಗಿಸುತ್ತಲೇ ಚಿಂತನೆಗೆ ಹಚ್ಚುವ ವಿಶಿಷ್ಟ ಕರಾಮತ್ತುಗಳು ಈ ಬರಹಗಳಲ್ಲಿ ವಿಪುಲವಾಗಿ ಕಾಣಿಸುತ್ತವೆ. ಮಾಹಿತಿ ಮನರಂಜನೆ ಮತ್ತು ವಿಷಯಸಂಗ್ರಹ ವಿತರಣೆ ಕುರಿತಂತೆ ವಿನೂತನ ಪ್ರಯೋಗಗಳನ್ನು ಮಾಡುವಲ್ಲಿ ಆಸಕ್ತರಾದ ಶ್ರೀವತ್ಸ ಜೋಶಿ ಸಮಾನಮನಸ್ಕರೊಡನೆ ಅದರ ವಿನಿಮಯ ಮಾಡಿಕೊಳ್ಳುವುದರಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಅಂಕಣ ಬರಹಗಳಲ್ಲಿಯೂ ಒಂದು ವಿನೂತನ ಪ್ರಯೋಗ, ಮೈಲಿಗಲ್ಲು ಎಂದೇ ಗುರುತಿಸಲ್ಪಟ್ಟಿರುವ ಜೋಶಿಯವರ ಬರವಣಿಗೆ ಅವರಿಂದ ನಿರೀಕ್ಷಿಸಬಹುದಾದ ಇನ್ನೂ ಉತ್ತಮ, ಉಪಯುಕ್ತ, ಮೌಲಿಕ ಕೃತಿಗಳ ಮುನ್ನೋಟದಂತಿದೆ.

About the Author

ಶ್ರೀವತ್ಸ ಜೋಶಿ

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದರು. ಕಲಿತದ್ದು  ಎಂಜಿನಿಯರಿಂಗ್ ಆದರೂ ಕನ್ನಡದ ಬಗ್ಗೆ ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆ ಆಸಕ್ತಿಯೂ ಹೊಂದಿದ್ದಾರೆ. ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿರುವ ಶ್ರೀವತ್ಸ ಜೋಶಿ ಕನ್ನಡದ ಪ್ರಸಿದ್ಧ ಪತ್ರಿಕೆಗಳ ಅಂಕಣ ಬರಹಗಾರರಾಗಿಯೂ ಕೂಡ ಹೆಸರು ಮಾಡಿದ್ದಾರೆ. ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಇವರು ದಟ್ಸ್ ಕನ್ನಡ.ಕಾಮ್ ಅಂತರ್ಜಾಲ ಕನ್ನಡ ಪತ್ರಿಕೆಯಲ್ಲಿ ಸತತ ಐದು ವರ್ಷಗಳ ವರೆಗೆ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣವನ್ನು ...

READ MORE

Related Books